varthabharthi


ಕರ್ನಾಟಕ

ವಿಜಯಪುರ: ಆರ್.ಟಿ.ಓ ಕಚೇರಿ ಮೇಲೆ ಎಸಿಬಿ ದಾಳಿ

ವಾರ್ತಾ ಭಾರತಿ : 5 Dec, 2019

ವಿಜಯಪುರ, ಡಿ.5: ವಿಜಯಪುರ ಆರ್.ಟಿ.ಓ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ‌ ನಡೆಸಿದ್ದು, ಎರಡೂವರೆ ಲಕ್ಷ ರೂ. ನಗದು ವಶ ಪಡಿಸಿಕೊಂಡಿದ್ದೇವೆ ಎಂದು ಎಸಿಬಿ ಎಸ್ಪಿ ಅಮರನಾಥ್ ರೆಡ್ಡಿ ಹೇಳಿದ್ದಾರೆ. 

ವಿಜಯಪುರದ ಆರ್.ಟಿ.ಓ ಕಚೇರಿಯಲ್ಲಿ ಮಾತನಾಡಿದ ಅವರು, ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ನಾವು ದಾಳಿ ಮಾಡಿದ್ದೇವೆ. ಜನರಿಂದ ನಿಗದಿತ ಹಣಕ್ಕಿಂತ ಹೆಚ್ಚಿನ ಹಣ ಸಂಗ್ರಹ ಮಾಡುತ್ತಿದ್ದರು. 20 ಜನ ಏಜೆಂಟರಿಂದ ದಾಖಲೆಗಳನ್ನು ವಶಕ್ಕೆ ಪಡೆದಿದ್ದೇವೆ. ತನಿಖೆ ಪ್ರಗತಿಯಲ್ಲಿರುವ ಕಾರಣ ಹೆಚ್ಚಿನ ಮಾಹಿತಿ ನಂತರ ಬಹಿರಂಗ ಮಾಡಲಾಗುವುದು. ನಾಯ್ಯಾಲಯದ ವಾರೆಂಟ್ ಪಡೆದು‌ ಕೆಲವು ಅಂಗಡಿಗಳನ್ನು ಸೀಝ್ ಮಾಡಲಾಗಿದೆ. ಕೆಲವು ಆರ್ಟಿಓ ಅಧಿಕಾರಿಗಳನ್ನು ಇದೇ ಸಮಯದಲ್ಲಿ ವಿಚಾರಣೆಗೆ ಒಳಪಡಿಸಿದ್ದೇವೆ ಎಂದು ತಿಳಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)