ಉ.ಪ್ರದೇಶದಲ್ಲಿ ಬಾಲಕಿಯ ಅತ್ಯಾಚಾರ: ನಾಲ್ವರ ಸೆರೆ
ಲಕ್ನೊ, ಡಿ.7: 14 ವರ್ಷದ ಬಾಲಕಿಯ ಮೇಲೆ ನಾಲ್ಕು ಮಂದಿ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಉತ್ತರಪ್ರದೇಶದ ಬುಲಂದ್ಶಹರ್ನ ಪಹಾಸು ಪ್ರದೇಶದಲ್ಲಿ ನಡೆದಿದ್ದು, ನಾಲ್ವರು ಆರೋಪಿಗಳನ್ನೂ ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ನಾಲ್ವರು ಆರೋಪಿಗಳೂ ಅಪ್ರಾಪ್ತ ವಯಸ್ಕರಾಗಿದ್ದು ಬಾಲಕಿಯ ಸಂಬಂಧಿಕರು ಎಂದು ತಿಳಿದು ಬಂದಿದೆ. ಇವರಲ್ಲಿ ಓರ್ವ ಅತ್ಯಾಚಾರ ಘಟನೆಯನ್ನು ಚಿತ್ರಿಸಿಕೊಂಡು ಅದನ್ನು ಇಂಟರ್ನೆಟ್ನಲ್ಲಿ ಅಪ್ಲೋಡ್ ಮಾಡಿದ್ದಾನೆ. ಈ ದೃಶ್ಯಾವಳಿ ವೈರಲ್ ಆಗಿದೆ. ಡಿಸೆಂಬರ್ 3ರಂದು ಘಟನೆ ನಡೆದಿದ್ದು ವೀಡಿಯೊ ವೈರಲ್ ಆದ ಬಳಿಕ ಶನಿವಾರ ಬೆಳಕಿಗೆ ಬಂದಿದೆ.
ಪ್ರಕರಣ ಬೆಳಕಿಗೆ ಬಂದ ಎರಡು ಗಂಟೆಯೊಳಗೆ ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ ಎಂದು ವರಿಷ್ಟ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
Next Story