varthabharthi


ಕರಾವಳಿ

ಸಮಸ್ತ ಕೇರಳ ಜಂಇಯ್ಯತಲ್ ಮುಅಲ್ಲಿಮೀನ್ 60ನೇ ವಾರ್ಷಿಕ ಪ್ರಚಾರ ಸಮ್ಮೇಳನ

ವಾರ್ತಾ ಭಾರತಿ : 8 Dec, 2019

ಉಳ್ಳಾಲ:  ಎಸ್ಕೆಎಸ್ಎಸ್ಎಫ್ ಅಜ್ಜಿನಡ್ಕ, ಉಚ್ಚಿಲ ಕೆಸಿರೋಡ್ ಶಾಖೆ ವತಿಯಿಂದ ಉಚ್ಚಿಲ ಜಂಕ್ಷನ್ ನಲ್ಲಿ ರವಿವಾರ ನಡೆದ ಸಮಸ್ತ ಕೇರಳ ಜಂಇಯ್ಯತಲ್ ಮುಅಲ್ಲಿಮೀನ್ 60ನೇ ವಾರ್ಷಿಕ ಪ್ರಚಾರ ಸಮ್ಮೇಳನ ಮತ್ತು ವಾರ್ಷಿಕ ಮಜ್ಲಿಸುನ್ನೂರು ಕಾರ್ಯಕ್ರಮದಲ್ಲಿ ಖಲೀಲ್ ಹುದವಿ ಅಲ್ ಮಾಲಿಕಿ ಭಾಗವಹಿಸಿ ಮಾತನಾಡಿದರು.

ಪ್ರಸಕ್ತ ಕಾಲದಲ್ಲಿ ಮುಸ್ಲಿಮರು ದಾರಿ ತಪ್ಪುತ್ತಿದ್ದಾರೆ. ಇಸ್ಲಾಂ ನ ಸಿದ್ಧಾಂತಗಳನ್ನು ಕ್ರಮವಾಗಿ ಪಾಲಿಸುವವರ ಸಂಖ್ಯೆ ಕಡಿಮೆ ಇದೆ. ಅಕ್ರಮ ಬಿಟ್ಟು ಒಳ್ಳೆಯ ಹೃದಯದಿಂದ ಎಲ್ಲರನ್ನು ಗೌರವಿಸಬೇಕು. ಧಾರ್ಮಿಕ ವಿಚಾರಗಳ ಬಗ್ಗೆ ಸಮಗ್ರ ಅಧ್ಯಯನ ಮಾಡಿದರೆ ಮಾತ್ರ ರಕ್ಷಣೆ ಸಾಧ್ಯ ಎಂದು ಅವರು ಹೇಳೀದರು.

ಸಮಸ್ತ ಉಪಾಧ್ಯಕ್ಷ ಇಬ್ರಾಹಿಂ ಬಾಖವಿ ಕೆಸಿರೋಡ್ ಉದ್ಘಾಟಿಸಿದರು. ಜಿಲ್ಲಾ ಖಾಝಿ ತ್ವಾಕಾ ಅಹ್ಮದ್  ಮುಸ್ಲಿಯಾರ್ ಅಧ್ಯಕ್ಷತೆ ವಹಿಸಿದ್ದರು. ಝೈನುಲ್ ಆಬಿದೀನ್ ಜಿಫ್ರಿ ತಂಙಳ್ ದುವಾ ನೆರವೇರಿಸಿದರು. ಸಯ್ಯದ್ ಅಮೀರ್ ತಂಙಳ್, ಸಯ್ಯದ್ ಬಾತಿಷ್ ತಂಙಳ್ ಮಜ್ಲಿಸುನ್ನೂರ್ ನ ನೇತೃತ್ವ ವಹಿಸಿದ್ದರು.

ವೇದಿಕೆಯಲ್ಲಿ ಹಾಶಿರ್ ಹಾಮಿದಿ ಕುಂಜತ್ತೂರು, ಶಾಸಕ ಯು.ಟಿ.ಖಾದರ್, ಹಿದಾಯತುಲ್ಲ ಉಚ್ಚಿಲ, ಇಸ್ಮಾಯಿಲ್ ಹಾಜಿ ದೇರಳಕಟ್ಟೆ, ಇಬ್ರಾಹಿಂ ಕೊಣಾಜೆ, ಸುಲೈಮಾನ್ ಅಜ್ಜಿನಡ್ಕ, ಬಶೀರ್ ರಹ್ಮಾನಿ, ಅಬೂಬಕರ್ ಅಜ್ಜಿ ನಡ್ಕ , ಉಚ್ಚಿಲ ಮದ್ರಸ ಸದ್ರ್ ಅಬ್ದುಲ್ ಅಝೀಝ್ ಮನ್ನಾನಿ, ಅಬ್ಬಾಸ್ ಹಾಜಿ ಕೊಳಂಗರೆ, ಅಬ್ಬಾಸ್ ಹಾಜಿ ಪೆರಿಬೈಲ್, ಸುಲೈಮಾನ್ ಅಜ್ಜಿ ನಡ್ಕ, ಅಬ್ಬಾಸ್ ಮಜಲ್, ಶಾಹುಲ್ ಹಮೀದ್ ಕೆಸಿರೋಡ್, ಅಬ್ದುಲ್ ಲತೀಫ್ ದಾರಿಮಿ ರೆಂಜಾಡಿ, ಮುನೀರ್ ಮೊಯ್ದಿನ್ ಮಾಸೂನ್, ಉಮರ್ ಫಾರೂಕ್, ರಹೀಂ ಯು.ಬಿ.ಎಂ ಮೊದಲಾದವರು ಉಪಸ್ಥಿತರಿದ್ದರು. ಅಬ್ದುಲ ಅರ್ಶದಿ ಸ್ವಾಗತಿಸಿದರು. ಮಹಮ್ಮದ್ ಯೂಸುಫ್ ಉಚ್ಚಿಲ ಕಿರಾಅತ್ ಪಠಿಸಿದರು. ಹನೀಫ್   ಎಸ್.ಬಿ. ಉಚ್ಚಿಲ ಕಾರ್ಯಕ್ರಮ ನಿರೂಪಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)