varthabharthi


ರಾಷ್ಟ್ರೀಯ

ನಟ ನವಾಝುದ್ದೀನ್ ಸಿದ್ದೀಕಿ ಸಹೋದರಿ ಕ್ಯಾನ್ಸರ್‌ನಿಂದ ನಿಧನ

ವಾರ್ತಾ ಭಾರತಿ : 8 Dec, 2019

ಮುಂಬೈ, ಡಿ.9: ಬಾಲಿವುಡ್ ನಟ ನವಾಝುದ್ದೀನ್ ಸಿದ್ದೀಕಿ ಅವರ ಸಹೋದರಿ ಸಯಾಮಾ ತಮ್ಶಿ ಸಿದ್ದೀಕಿ ಶನಿವಾರ ಕ್ಯಾನ್ಸರ್‌ನಿಂದ ಮೃತಪಟ್ಟಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

 26 ವರ್ಷದ ಸಯಾಮಾ 18 ವರ್ಷದವರಿದ್ದಾಗ ಸ್ತನ ಕ್ಯಾನ್ಸರ್‌ಗೆ ತುತ್ತಾಗಿದ್ದು 8 ವರ್ಷ ಕ್ಯಾನ್ಸರ್ ವಿರುದ್ಧ ಹೋರಾಡಿದ್ದಾರೆ. ಸಹೋದರಿ ಕೊನೆಯುಸಿರೆಳೆಯುವ ಸಂದರ್ಭ ನವಾಜುದ್ದೀನ್ ಅಮೆರಿಕಾದಲ್ಲಿ ‘ನೋ ಲ್ಯಾಂಡ್ಸ್ ಮ್ಯಾನ್’ ಎಂಬ ಸಿನೆಮದ ಶೂಟಿಂಗ್‌ನಲ್ಲಿ ನಿರತರಾಗಿದ್ದರು. ಮೃತರ ಸ್ವಗ್ರಾಮವಾದ ಉತ್ತರಪ್ರದೇಶದ ಬುಧಾನಾ ಗ್ರಾಮದಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ ಎಂದು ವರದಿಯಾಗಿದೆ.

 ಸಹೋದರಿ ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ಬಗ್ಗೆ ಕಳೆದ ವರ್ಷದ ಅಕ್ಟೋಬರ್‌ನಲ್ಲಿ ನವಾಝುದ್ದೀನ್ ಟ್ವಿಟರ್‌ನಲ್ಲಿ ಮಾಹಿತಿ ನೀಡಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)