ಗಾಂಜಾ ಸೇವನೆ: ಓರ್ವನ ಬಂಧನ
ಉಡುಪಿ, ಡಿ.11: ಮೂಡನಿಡಂಬೂರು ಎಪಿಎಂಸಿ ಮಾರ್ಕೆಟ್ ಯಾರ್ಡ್ ಬಳಿ ಗಾಂಜಾ ಸೇವನೆ ಮಾಡುತಿದ್ದ ಓರ್ವನನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಬಂಧಿತನನ್ನು ರಾಯಚೂರು ಜಿಲ್ಲೆಯ ಹಲ್ಕೂರು ಗ್ರಾಮದ ಗುಂಜಳ್ಳಿ ನಿವಾಸಿ ಸುಶಾಂತ್ ಸುಮಿತ್ ಬಿಂಗಾರಿ (24) ಎಂದು ಗುರುತಿಸಲಾಗಿದೆ.
ಆರೋಪಿಯನ್ನು ಮಣಿಪಾಲ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿ, ಖಚಿತ ಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story