varthabharthi


ರಾಷ್ಟ್ರೀಯ

ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಹಿರಿಯ ಐಪಿಎಸ್ ಅಧಿಕಾರಿ ಅಬ್ದುರ್ ರಹಮಾನ್ ರಾಜೀನಾಮೆ

ವಾರ್ತಾ ಭಾರತಿ : 11 Dec, 2019

Photo: Twitter (@AbdurRahman_IPS)

ಮುಂಬೈ,ಡಿ.11: ಬುಧವಾರ ರಾಜ್ಯಸಭೆಯಲ್ಲಿ ಪೌರತ್ವ (ತಿದ್ದುಪಡಿ) ಮಸೂದೆ ಅಂಗೀಕಾರಗೊಂಡ ಬೆನ್ನಿಗೇ ಮುಂಬೈ ಐಜಿಪಿ ಅಬ್ದುರ್ ರಹಮಾನ್ ಅವರು ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.

"ಈ ಮಸೂದೆಯು ಭಾರತದ ಧಾರ್ಮಿಕ ಬಹುತ್ವಕ್ಕೆ ವಿರುದ್ಧವಾಗಿದೆ. ಪ್ರಜಾಸತ್ತಾತ್ಮಕ ರೀತಿಯಲ್ಲಿ ಮಸೂದೆಯನ್ನು ವಿರೋಧಿಸುವಂತೆ ನ್ಯಾಯವನ್ನು ಪ್ರೀತಿಸುವ ಎಲ್ಲ ಜನರಿಗೂ ನಾನು ಕೋರಿಕೊಳ್ಳುತ್ತೇನೆ. ಮಸೂದೆಯು ಸಂವಿಧಾನದ ಮೂಲ ಆಶಯಕ್ಕೇ ವಿರುದ್ಧವಾಗಿದೆ” ಎಂದು ಅಬ್ದುರ್ ರಹಮಾನ್ ಟ್ವೀಟಿಸಿದ್ದಾರೆ.

ಅಬ್ದುರ್ ರಹಮಾನ್ ಅವರ ಕ್ರಮಕ್ಕೆ ಟ್ವಿಟರ್‌ನಲ್ಲಿ ಭಾರೀ ಸ್ವಾಗತ ಸಿಕ್ಕಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)