varthabharthi

ಕ್ರೀಡೆ

ಮೊದಲ ಟೆಸ್ಟ್: ಐತಿಹಾಸಿಕ ಪಾಕ್-ಲಂಕಾ ಪಂದ್ಯಕ್ಕೆ ಮಳೆ ಅಡ್ಡಿ

ವಾರ್ತಾ ಭಾರತಿ : 12 Dec, 2019

ರಾವಲ್ಪಿಂಡಿ, ಡಿ.12: ಪಾಕಿಸ್ತಾನ ಹಾಗೂ ಶ್ರೀಲಂಕಾ ನಡುವಿನ ಐತಿಹಾಸಿಕ ಮೊದಲ ಟೆಸ್ಟ್‌ನ 2ನೇ ದಿನವಾದ ಗುರುವಾರದ ಪಂದ್ಯಕ್ಕೆ ಭಾರೀ ಮಳೆ ಹಾಗೂ ಮಂದ ಬೆಳಕು ಅಡ್ಡಿಯಾಗಿದೆ. 2009ರಲ್ಲಿ ಉಗ್ರರ ದಾಳಿ ನಡೆದ ಬಳಿಕ ಮೊದಲ ಬಾರಿ ಪಾಕಿಸ್ತಾನ ತನ್ನ ನೆಲದಲ್ಲಿ ಟೆಸ್ಟ್ ಆಡುತ್ತಿದೆ.

5 ವಿಕೆಟ್‌ಗಳ ನಷ್ಟಕ್ಕೆ 220 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ಶ್ರೀಲಂಕಾ ಇಂದು ಕೇವಲ 18.2 ಓವರ್‌ಗಳ ಪಂದ್ಯ ಆಡಿದ್ದು, 2ನೇ ದಿನದಾಟ ರದ್ದುಗೊಂಡಾಗ 6 ವಿಕೆಟ್ ನಷ್ಟಕ್ಕೆ 263 ರನ್ ಗಳಿಸಿತ್ತು. ಧನಂಜಯ ಡಿಸಿಲ್ವಾ ಔಟಾಗದೆ 72 ರನ್(131 ಎಸೆತ)ಗಳಿಸಿದ್ದರು. ಬೆಳಗ್ಗಿನ ಅವಧಿಯಲ್ಲಿ ಕೇವಲ 7.5 ಓವರ್‌ಗಳ ಪಂದ್ಯ ಆಡಲು ಸಾಧ್ಯವಾಗಿತ್ತು. 2 ಗಂಟೆ, 43 ನಿಮಿಷಗಳ ಕಾಲ ಮಳೆ ಸುರಿಯಿತು. ಮತ್ತೆ ಪಂದ್ಯ ಆರಂಭವಾದಾಗ 10 ಓವರ್‌ಗಳ ಆಡಲು ಸಾಧ್ಯವಾಯಿತು. ಮಧ್ಯಾಹ್ನ 3:30ಕ್ಕೆ ಪಂದ್ಯ ರದ್ದುಗೊಂಡಾಗ ನಿರೊಶನ್ ಡಿಕ್ವೆಲ್ಲಾ 33 ರನ್ ಗಳಿಸಿ ಔಟಾಗಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)