ವಿಶ್ವನಾಥನ್ ಆನಂದ್ ಆತ್ಮಚರಿತ್ರೆ ‘ಮೈಂಡ್ ಮಾಸ್ಟರ್’ಬಿಡುಗಡೆ
ಚೆನ್ನೈ, ಡಿ.14: ಐದು ಬಾರಿಯ ವಿಶ್ವ ಚೆಸ್ ಚಾಂಪಿಯನ್ ವಿಶ್ವನಾಥನ್ ಆನಂದ್ ಅವರ ಆತ್ಮಚರಿತ್ರೆ ‘ಮೈಂಡ್ ಮಾಸ್ಟರ್’ ಪುಸ್ತಕವನ್ನು ಖಾಸಗಿ ಹೊಟೇಲ್ವೊಂದರಲ್ಲಿ ಶುಕ್ರವಾರ ಸಂಜೆ ಬಿಡುಗಡೆಗೊಳಿಸಲಾಗಿದೆ.
ಕ್ರೀಡಾ ಪತ್ರಕರ್ತ ಸುಸಾನ್ ನಿನಾನ್ ಪುಸ್ತಕದ ಸಹ-ಲೇಖಕರಾಗಿ ಕೆಲಸ ಮಾಡಿದ್ದಾರೆ.
ಪುಸ್ತಕದ ಕೆಲವು ಭಾಗವನ್ನು ಓದಿದ ಟಿಎಚ್ಜಿ ಪ್ರಕಾಶನ ಪ್ರೈ.ಲಿ.ನ ಎನ್.ರಾಮ್, ಪುಸ್ತಕದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.
ಈ ಪುಸ್ತಕದಲ್ಲಿ ಆಸಕ್ತಿದಾಯಕ ಪ್ರಯಾಣವಿದೆ. ನನ್ನ ವೃತ್ತಿಜೀವನದ ಪ್ರಮುಖ ನೆನಪುಗಳು ಇದರಲ್ಲಿದೆ ಎಂದು 50ರ ವಯಸ್ಸಿನ ಆನಂದ್ ಹೇಳಿದ್ದಾರೆ.
Next Story