ರಾಮನಾಥ ಎಂ
ಕುಂದಾಪುರ, ಡಿ.17: ಕುಂದಾಪುರ ಪುರಸಭೆಯ ಮಾಜಿ ಸದಸ್ಯ ಹಾಗೂ ಹೊಟೇಲ್ ಉದ್ಯಮಿ, ಬಸ್ರೂರಿನ ಕೊಲ್ಕೇರಿ ನಿವಾಸಿ ರಾಮನಾಥ ಎಂ.ಕೋಡಿ ಅವರು ಇತ್ತೀಚೆಗೆ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 78 ವರ್ಷ ಪ್ರಾಯ ವಾಗಿತ್ತು. ಮೃತರು ಪತ್ನಿ ಮೂವರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ದುಬೈ ರಾಮಣ್ಣ ಎಂದೇ ಜನಪ್ರಿಯರಾಗಿದ್ದ ಇವರು ಮರವಂತೆ ಎರಡು ದಶಕಗಳಿಗೂ ಅಧಿಕ ಕಾಲ ಹೊಟೇಲ್ನ್ನು ನಡೆಸುತಿದ್ದರು. ಅವರು ಕೋಡಿಯ ಶ್ರೀಚಕ್ರೇಶ್ವರಿ ದೇವಸ್ಥಾನದ ಆಡಳಿತ ಮಂಡಳಿಯಲ್ಲೂ ಸಕ್ರಿಯರಾಗಿದ್ದರು.
Next Story