ಕೆಸಿಎಫ್ ಯುಎಇ ವತಿಯಿಂದ ಡಿ.20ರಂದು ಪೌರ ಸಮ್ಮಿಲನ
ಶಾರ್ಜಾ, ಡಿ.18: ವಿವಾದಾಸ್ಪದ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸಲು ಹೊರಟಿರುವ ಭಾರತ ಸರಕಾರದ ವಿರುದ್ಧ ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿಯ ಅಧೀನದಲ್ಲಿ 'ಜಾತ್ಯಾತೀತ ರಾಷ್ಟ್ರ- ಧಾರ್ಮಿಕ ಪೌರತ್ವ' ಎಂಬ ವಿಷಯದಲ್ಲಿ ವಿಚಾರ ಸಂಕಿರಣ, ಪೌರ ಸಮ್ಮಿಲನ ಡಿಸೆಂಬರ್ 20 ರಂದು ಯಾಸತ್ ಟವರ್ ಶಾರ್ಜಾದಲ್ಲಿ ನಡೆಯಲಿದೆ.
ಪ್ರಮುಖ ಸಂಪನ್ಮೂಲ ವ್ಯಕ್ತಿಗಳಿಂದ ವಿಷಯ ಮಂಡನೆ ನಡೆಯುವ ಈ ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಿಗೆ ಮಾತ್ರ ಪ್ರವೇಶವನ್ನು ನಿಗದಿಪಡಿಸಲಾಗಿದೆ ಎಂದು ಯುಎಇ ಕೆಸಿಎಫ್ ರಾಷ್ಟ್ರೀಯ ಸಮಿತಿ ಪ್ರಕಟನೆ ತಿಳಿಸಿದೆ.
Next Story