ದಾಸಪ್ಪ ಪುತ್ರನ್
ಮಲ್ಪೆ, ಡಿ.20: ಉಡುಪಿ, ಕುಂದಾಪುರದ ಪೋಟೊ ಪ್ಯಾಲೆಸ್ನ ಮಾಲಕ ಹಾಗೂ ಜೀವವಿಮಾ ನಿಗಮದ ನಿವೃತ್ತ ಉದ್ಯೋಗಿ ಕೆ.ದಾಸಪ್ಪ ಪುತ್ರನ್ ಅವರು ಅಲ್ಪಕಾಲದ ಅಸೌಖ್ಯದ ಬಳಿಕ ಡಿ.19ರಂದು ನಿಧನ ಹೊಂದಿದರು. 82 ವರ್ಷ ಪ್ರಾಯದ ಅವರು ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಕೊಡವೂರು ಕಾನಂಗಿ ಶ್ರೀದೇವಿ ಜ್ಞಾನೋದಯ ಪಾಂಡುರಂಗ ಭಜನ ಮಂದಿರದ ಅಧ್ಯಕ್ಷರಾಗಿದ್ದ ಅವರು ಕಲ್ಮಾಡಿ ಉದಯಕಲಾ ಯುವಕ ಮಂಡಲದ ಸ್ಥಾಪಕಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
Next Story