varthabharthi

ರಾಷ್ಟ್ರೀಯ

ಜಾಮೀನಿನಲ್ಲಿ ಬಿಡುಗಡೆಯಾದ ನಂತರ ಕೃತ್ಯ

ಲೈಂಗಿಕ ಕಿರುಕುಳ ಪ್ರಕರಣ: ಸಂತ್ರಸ್ತೆಯ ತಾಯಿಯನ್ನು ಥಳಿಸಿ ಕೊಂದ ದುಷ್ಕರ್ಮಿಗಳು

ವಾರ್ತಾ ಭಾರತಿ : 17 Jan, 2020

ಕಾನ್ಪುರ: ಬಾಲಕಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ್ದ ದುಷ್ಕರ್ಮಿಗಳು ಜಾಮೀನಿನಲ್ಲಿ ಬಿಡುಗಡೆಯಾದ ನಂತರ ಬಾಲಕಿಯ ತಾಯಿಯನ್ನು ಥಳಿಸಿ ಹತ್ಯೆಗೈದಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರಲ್ಲಿ ನಡೆದಿದೆ.

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದ ಈ ದುಷ್ಕರ್ಮಿಗಳು ಕಳೆದ ವಾರ ಸಂತ್ರಸ್ತೆಯ ಮನೆಗೆ ನುಗ್ಗಿ ಮನೆಯಲ್ಲಿದ್ದವರಿಗೆ ಥಳಿಸಿದ್ದರು. ಈ ದುಷ್ಕರ್ಮಿಗಳನ್ನು ಆಬಿದ್, ಮಿಂಟು, ಮಹಬೂಬ್, ಚಾಂದ್ ಬಾಬು, ಜಮೀಲ್ ಮತ್ತು ಫಿರೋಝ್ ಎಂದು ಗುರುತಿಸಲಾಗಿದೆ. 2018ರಲ್ಲಿ ಇವರನ್ನು ಕಿರುಕುಳ ಪ್ರಕರಣದಲ್ಲಿ ಬಂಧಿಸಲಾಗಿತ್ತು.

ಸ್ಥಳೀಯ ನ್ಯಾಯಾಲಯವೊಂದು ಈ ಕಿಡಿಗೇಡಿಗಳಿಗೆ ಜಾಮೀನು ನೀಡಿದ ನಂತರ ಕಳೆದ ಗುರುವಾರ ಬಾಲಕಿಯ ಮನೆಗೆ ನುಗ್ಗಿದ ಇವರು ಪ್ರಕರಣ ಹಿಂಪಡೆಯುವಂತೆ ಹೇಳಿದ್ದರು. ಪ್ರಕರಣ ಹಿಂಪಡೆಯಲು ಮನೆಯವರು ನಿರಾಕರಿಸಿದ್ದು, ದುಷ್ಕರ್ಮಿಗಳು ಥಳಿಸಿದ್ದರು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬಾಲಕಿಯ ತಾಯಿ ಮತ್ತು ಮತ್ತೊಬ್ಬ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಬಾಲಕಿಯ ತಾಯಿ ಮೃತಪಟ್ಟಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)