ಶಿಖರ್ ಧವನ್ಗೆ ಗಾಯ
ಬೆಂಗಳೂರು, ಜ.19: ಟೀಮ್ ಇಂಡಿಯಾದ ಆರಂಭಿಕ ಬ್ಯಾಟ್ಸ್ಮನ್ ಶಿಖರ್ ಧವನ್ ಗಾಯಗೊಂಡಿದ್ದಾರೆ. ಅವರು ಆಸ್ಟ್ರೇಲಿಯ ವಿರುದ್ಧ ಮೂರನೇ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದಾಗ ಗಾಯಗೊಂಡರು. ಅವರ ಭುಜಕ್ಕೆ ಆಗಿರುವ ಗಾಯದ ಸ್ವರೂಪ ತಿಳಿಯಲು ಎಕ್ಸ್ ರೇ ತೆಗೆಯಲಾಗಿದೆ .ಧವನ್ ಫೀಲ್ಡಿಂಗ್ ಮಾಡುತ್ತಿದ್ದಾಗ ಆ್ಯರೊನ್ ಫಿಂಚ್ ಅಟ್ಟಿದ ಚೆಂಡನ್ನು ತಡೆಯಲು ಹಾರಿದಾಗ ಅವರ ಭುಜಕ್ಕೆ ಗಾಯವಾಗಿದೆ. ಬಳಿಕ ಅವರ ಫೀಲ್ಡಿಂಗ್ ನಡೆಸಲಿಲ್ಲ.
Next Story