ಮರಿಯಾ ಶರಪೋವಾ ನಿರ್ಗಮನ
ಮೆಲ್ಬೋರ್ನ್, ಜ.21: ಆಸ್ಟ್ರೇಲಿಯನ್ ಓಪನ್ನಲ್ಲಿ ಐದು ಬಾರಿ ಗ್ರಾನ್ ಸ್ಲಾಮ್ ವಿಜೇತೆ ರಶ್ಯದ ಮರಿಯಾ ಶರಪೋವಾ ಮೊದಲ ಸುತ್ತಿನಲ್ಲಿ ನಿರ್ಗಮಿಸಿದ್ದಾರೆ.
ಮಂಗಳವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ 6ನೇ ಶ್ರೇಯಾಂಕಿತೆ ಶರಪೋವಾ ಅವರು ನಂ.19 ಡೊನ್ನಾ ವೆಕಿಕ್ ವಿರುದ್ಧ 3-6 , 4-6 ಅಂತರದಿಂದ ಸೋಲು ಅನುಭವಿಸಿದರು. ಇದರೊಂದಿಗೆ ಶರಪೋವಾ ಅವರು ಸತತ 3ನೇ ಬಾರಿಗೆ ಮೂರು ಪ್ರಮುಖ ಗ್ರಾನ್ ಸ್ಲಾಮ್ ಇವೆಂಟ್ನಲ್ಲಿ ಪ್ರಥಮ ಸುತ್ತಿನಲ್ಲಿ ಹೊರನಡೆದಂತಾಗಿದೆ.
ಶರಪೋವಾ ಅವರು ವೈಲ್ಡ್ ಕಾರ್ಡ್ ಮೂಲಕ ಮುಖ್ಯ ಡ್ರಾದಲ್ಲಿ ಪ್ರವೇಶ ಪಡೆದಿದ್ದರು. 2008ರಲ್ಲಿ ಕೊನೆಯ ಬಾರಿ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಯನ್ನು ಜಯಿಸಿದ್ದ ಶರಪೋವಾ ಮೊದಲ ಸುತ್ತಿನಲ್ಲಿ ವೆಕಿಕ್ ವಿರುದ್ಧ ಸೋಲು ಅನುಭವಿಸಿದರು.
32ರ ಹರೆಯದ ಶರಪೋವಾ ಗಾಯದ ಕಾರಣದಿಂದಾಗಿ ಈ ಹಿಂದೆ ಸಮಸ್ಯೆ ಎದುರಿಸಿದ್ದರು. ಅಲ್ಲದೆ ಡೋಪಿಂಗ್ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡು 15 ತಿಂಗಳ ಅಮಾನತು ಸಜೆ ಅನುಭವಿಸಿದ್ದರು. ಬಳಿಕ ಅವರು 2018ರ ಫ್ರೆಂಚ್ ಓಪನ್ ಪಂದ್ಯಾವಳಿಯಲ್ಲಿ ಕ್ವಾರ್ಟರ್ ಫೈನಲ್ ತಲುಪಿರುವುದು ಅವರ ದೊಡ್ಡ ಸಾಧನೆಯಾಗಿದೆ.