varthabharthi

ನಿಮ್ಮ ಅಂಕಣ

ಟೀಕಿಸುವವರನ್ನು ದ್ವೇಷಿಸುವುದು ಸರಿಯೇ?

ವಾರ್ತಾ ಭಾರತಿ : 23 Jan, 2020
-ಕೆ. ಎಸ್. ನಾಗರಾಜ್ ಹನುಮಂತನಗರ, ಬೆಂಗಳೂರು

ಮಾನ್ಯರೇ,

ಕೇಂದ್ರ ಸರಕಾರದ ಹಲವಾರು ಕಾರ್ಯಕ್ರಮಗಳು ಮತ್ತು ನಿಲುವುಗಳ ಬಗ್ಗೆ ದೇಶದಲ್ಲಿ ಕಲಾವಿದರು, ಸಾಹಿತಿಗಳು ಪತ್ರಕರ್ತರು ಮತ್ತು ವಿವಿಧ ಸಂಘಟನೆಗಳು, ತಮ್ಮ ವಿರೋಧವನ್ನು ವ್ಯಕ್ತಪಡಿಸಿ ಬಹಿರಂಗವಾಗಿ ಹೇಳಿಕೆಯನ್ನು ನೀಡುವುದು ಅಥವಾ ಪ್ರತಿಭಟನೆಗಳಲ್ಲಿ ಪಾಲ್ಗೊಳ್ಳುವುದು, ದೊಡ್ಡ ಅಪರಾಧ ಎನ್ನುವ ರೀತಿಯಲ್ಲಿ ಬಿಜೆಪಿಯ ನಾಯಕರು ಮತ್ತು ಕೇಂದ್ರದ ಸಚಿವರು ವಿರೋಧ ವ್ಯಕ್ತಪಡಿಸುವ ವ್ಯಕ್ತಿಗಳು ಮತ್ತು ಸಂಘಟನೆಗಳ ಬಗ್ಗೆ ಅತ್ಯಂತ ಲಘುವಾಗಿ ಮಾತನಾಡುವುದು ಮತ್ತು ವೈಯಕ್ತಿಕ ಮಟ್ಟದಲ್ಲಿ ಟೀಕಿಸುವುದು ಅತಿಯಾಗುತ್ತಿದೆ. ಅಲ್ಲದೆ ಅವರ ವ್ಯಕ್ತಿತ್ವಕ್ಕೆ ಮತ್ತು ವೃತ್ತಿ ಬದುಕಿಗೆ ತೊಂದರೆಯಾಗುವ ರೀತಿಯಲ್ಲಿ ಕಾನೂನುನನ್ನು ಅವರ ಮೇಲೆ ಹೇರುತ್ತಿರುವುದು ಕೂಡಾ ಸರಿಯಲ್ಲ! ಪ್ರಜಾಪ್ರಭುತ್ವದಲ್ಲಿ ಎಲ್ಲರ ಮಾತನ್ನು ಎಲ್ಲರೂ ಒಪ್ಪಬೇಕಿಲ್ಲ.! ಒಪ್ಪುವವರು ಮತ್ತು ಒಪ್ಪದವರು ಇದ್ದೇ ಇರುತ್ತಾರೆ. ನಿಮ್ಮ ನಿಲುವುಗಳನ್ನು ವಿರೋಧಿಸಿದ ಮಾತ್ರಕ್ಕೆ ಅವರು ದೇಶ ದ್ರೋಹಿಗಳು ಆಗುವುದಿಲ್ಲ ಅಥವಾ ದೇಶಕ್ಕೆ ಅಪಾಯಕರ ವ್ಯಕ್ತಿಗಳೂ ಆಗುವುದಿಲ್ಲ. ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರುವುದಾದರೆ, ಟೀಕಿಸುವವರನ್ನು ಕೀಳು ಮಟ್ಟದಲ್ಲಿ ಮಾತನಾಡುವ ಬದಲಿಗೆ ನಿಮ್ಮ ವಿಚಾರಧಾರೆಯನ್ನಷ್ಟೇ ಪ್ರತಿಪಾದಿಸುತ್ತಾ, ಮುನ್ನಡೆಯಿರಿ. ಒಪ್ಪುವವರು ನಿಮ್ಮ ವಿಚಾರವನ್ನು ಒಪ್ಪಿಬರುತ್ತಾರೆ. ಒಪ್ಪದೇ ಇರುವವರು ತಮ್ಮ ವಿರೋಧವನ್ನು ವ್ಯಕ್ತ ಪಡಿಸುತ್ತಲೇ ಇರುತ್ತಾರೆ. ಕಲಾವಿದರು ಮತ್ತು ಸಾಹಿತಿಗಳು ನಿಮ್ಮ ಸರಕಾರದ ತುತ್ತೂರಿಗಳಾಗಬೇಕಾಗಿಲ್ಲ ಅಥವಾ ನಿಮ್ಮ ಪಕ್ಷದ ವಕ್ತಾರರೂ ಆಗಬೇಕಿಲ್ಲ, ಮಾತನಾಡುವ ಹಕ್ಕು ಅವರಿಗಿದೆ. ಆ ಹಕ್ಕನ್ನು ಕಸಿದುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)