varthabharthi

ಅಂತಾರಾಷ್ಟ್ರೀಯ

ಭಾರತದ ಆರ್ಥಿಕ ಹಿಂಜರಿತ ತಾತ್ಕಾಲಿಕ: ಐಎಂಎಫ್ ಮುಖ್ಯಸ್ಥೆ

ವಾರ್ತಾ ಭಾರತಿ : 24 Jan, 2020

ಡಾವೋಸ್, ಜ. 24: ಭಾರತದಲ್ಲಿ ತಲೆದೋರಿರುವ ಆರ್ಥಿಕ ಹಿಂಜರಿತವು ತಾತ್ಕಾಲಿಕವೆಂಬಂತೆ ಕಂಡುಬರುತ್ತಿದೆ ಹಾಗೂ ಮುಂದೆ ಪರಿಸ್ಥಿತಿ ಸಧಾರಿಸಬಹುದು ಎಂದು ಅಂತರ್‌ರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಮುಖ್ಯಸ್ಥೆ ಕ್ರಿಸ್ಟಲೀನಾ ಜಾರ್ಜಿಯೆವ ಶುಕ್ರವಾರ ಹೇಳಿದ್ದಾರೆ.

ಸ್ವಿಟ್ಸರ್‌ಲ್ಯಾಂಡ್‌ನ ಡಾವೋಸ್ ನಗರದಲ್ಲಿ ನಡೆುಯುತ್ತಿರುವ ವಿಶ್ವ ಆರ್ಥಿಕ ವೇದಿಕೆಯಲ್ಲಿ ಮಾತನಾಡಿದ ಅವರು, ಅಮೆರಿಕ ಮತ್ತು ಚೀನಾ ಮೊದಲ ಹಂತದ ವ್ಯಾಪಾರ ಒಪ್ಪಂದ ಮಾಡಿಕೊಂಡ ಬಳಿಕ ಕಡಿಮೆಯಾಗಿರುವ ವ್ಯಾಪಾರ ಉದ್ವಿಗ್ನತೆ, ತೆರಿಗೆ ಕಡಿತ ಹಾಗೂ ಇತರ ಹಲವಾರು ವಿಷಯಗಳು ಈ ನಿಟ್ಟಿನಲ್ಲಿ ಧನಾತ್ಮಕ ಅಂಶಗಳಾಗಿ ಪರಿಣಮಿಸುತ್ತವೆ ಎಂದರು.

ಆದರೂ, 3.3 ಶೇಕಡ ಬೆಳವಣಿಗೆ ದರವು ಜಾಗತಿಕ ಆರ್ಥಿಕತೆಗೆ ಪೂರಕವಾಗಿಯೇನೂ ಇಲ್ಲ ಎಂದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)