varthabharthi

ಸಿನಿಮಾ

ಅರಣ್ಯಾಧಿಕಾರಿ ವಿದ್ಯಾಬಾಲನ್

ವಾರ್ತಾ ಭಾರತಿ : 26 Jan, 2020

ಬಾ ಲಿವುಡ್‌ನ ಪ್ರತಿಭಾವಂತ ನಟಿ ವಿದ್ಯಾಬಾಲನ್ ತನ್ನ ಸತ್ವಯುತ ಅಭಿನಯದಿಂದಲೇ ಬಾಲಿವುಡ್‌ನಲ್ಲಿ ಆಗಾಗ್ಗೆ ಸುದ್ದಿ ಮಾಡುತ್ತಾ ಬಂದಿದ್ದಾರೆ. ಇದೀಗ ವಿದ್ಯಾ ಬಾಲನ್ ಅಭಿನಯದ ಶಕುಂತಲಾ ದೇವಿ ಚಿತ್ರವು ಮೇ 8ರಂದು ಬಿಡುಗಡೆಯಾಗಲಿದೆ. ಖ್ಯಾತ ಗಣಿತಶಾಸ್ತ್ರಜ್ಞೆ ಶಕುಂತಲಾ ದೇವಿ ಅವರ ಜೀವನಕಥೆ ಆಧರಿಸಿದ ಈ ಚಿತ್ರದ ಪೋಸ್ಟರ್‌ಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿದ್ದು, ಪ್ರೇಕ್ಷಕರ ಕುತೂಹಲವನ್ನು ಹೆಚ್ಚಿಸುವಲ್ಲಿ ಸಫಲವಾಗಿವೆ. ಶಕುಂತಲಾ ದೇವಿ ಚಿತ್ರದ ಬಳಿಕ ವಿದ್ಯಾಬಾಲನ್‌ಗೆ ಇನ್ನೊಂದು ಚಾಲೆಜಿಂಗ್ ಪಾತ್ರದಲ್ಲಿ ನಟಿಸುವ ಅವಕಾಶ ದೊರೆತಿದೆಯಂತೆ. ನರಭಕ್ಷಕ ಹುಲಿ ಅವನಿ ಬೇಟೆಯ ಕುರಿತ ನೈಜ ಘಟನೆಯನ್ನು ಆಧರಿಸಿದ ಚಿತ್ರದಲ್ಲಿ ಆಕೆ ನಟಿಸಲಿದ್ದಾರೆ. ಈ ಸಿನೆಮಾದಲ್ಲಿ ಅವರಿಗೆ ಅರಣ್ಯ ಅಧಿಕಾರಿಯ ಪಾತ್ರವಂತೆ.

ಮಹಾರಾಷ್ಟ್ರದ ಯಾವತ್ಮಾಲ್ ಜಿಲ್ಲೆಯಲ್ಲಿ 13 ಮಂದಿಯನ್ನು ಕೊಂದುಹಾಕಿದ ನರಭಕ್ಷಕ ಹುಲಿ ಅವನಿಯನ್ನು, ಆನಂತರ ಅರಣ್ಯ ಅಧಿಕಾರಿಗಳು ಹತ್ಯೆಗೈಯುವಲ್ಲಿ ಸಫಲರಾಗಿದ್ದರು.

   ಶಕುಂತಲಾ ದೇವಿ ಬಯೋಪಿಕ್‌ನ ನಿರ್ಮಾಪಕರೇ ಈ ಚಿತ್ರಕ್ಕೂ ಹಣ ಹೂಡಲಿದ್ದಾರೆ. ಮುಂದಿನ ಎರಡು ತಿಂಗಳೊಳಗೆ ಶೂಟಿಂಗ್ ಆರಂಭಗೊಳ್ಳಲಿದೆ. ಚಿತ್ರದ ಉಳಿದ ಪಾತ್ರವರ್ಗದ ಆಯ್ಕೆ ಶೀಘ್ರದಲ್ಲೇ ನಡೆಯಲಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)