varthabharthi

ಸಿನಿಮಾ

ಬಾಲಿವುಡ್ ಪ್ರವೇಶಿಸಲಿರುವ ವಿಜಯ್ ದೇವರಕೊಂಡ

ವಾರ್ತಾ ಭಾರತಿ : 26 Jan, 2020

‘ಅರ್ಜುನ್ ರೆಡ್ಡಿ’ ಚಿತ್ರವನ್ನು ಭಾರತದ ಚಿತ್ರೋದ್ಯಮ ಎಂದಿಗೂ ಮರೆಯಲು ಸಾಧ್ಯವಿಲ್ಲ. ಈ ಚಿತ್ರ ದಕ್ಷಿಣ ಭಾರತದಲ್ಲಿ ಅಲೆಯೊಂದನ್ನು ಸೃಷ್ಟಿಸಿತ್ತು. ಅಲ್ಲದೆ ಬಾಕ್ಸ್ ಆಫೀಸ್‌ನಲ್ಲಿ ಹಿಟ್ ಆಗಿತ್ತು. ಕಳೆದ ವರ್ಷ ಈ ಚಿತ್ರವನ್ನು ಹಿಂದಿಯಲ್ಲಿ ರಿಮೇಕ್ ಮಾಡಲಾಗಿತ್ತು. ಈ ಚಿತ್ರದಲ್ಲಿ ಶಾಹಿದ್ ಕಫೂರ್ ನಟಿಸಿದ್ದರು. ಈ ಚಿತ್ರ ಕೂಡ ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆದಿತ್ತು. ‘ಅರ್ಜುನ್ ರೆಡ್ಡಿ’ ಡ್ಯಾಶಿಂಗ್ ಸ್ಟಾರ್ ವಿಜಯ್ ದೇವರಕೊಂಡ ಅವರನ್ನು ದೇಶಕ್ಕೆ ಪರಿಚಯಿಸಿತು. ಈಗ ಈ ವಿಜಯ್ ದೇವರಕೊಂಡ ಬಾಲಿವುಡ್ ಪಾದಾರ್ಪಣೆ ಮಾಡಲು ಎಲ್ಲ ಸಿದ್ಧತೆ ನಡೆಸುತ್ತಿದ್ದಾರೆ. ವಿಜಯ್ ದೇವರಕೊಂಡ ಅವರು ಹಿಂದಿ ಚಿತ್ರವೊಂದರಲ್ಲಿ ನಟಿಸಲಿದ್ದಾರೆ ಎಂಬ ಸಿಹಿ ಸುದ್ದಿಯನ್ನು ಕರಣ್ ಜೋಹರ್ ನೀಡಿದ್ದಾರೆ. ಕೆಲವು ತಿಂಗಳ ಹಿಂದೆ ವಿಜಯ್ ದೇವರಕೊಂಡ ಅವರ ಚಿತ್ರ ‘ಡಿಯರ್ ಕಾಮ್ರೆಡ್’ ಬಿಡುಗಡೆಯಾಗಿತ್ತು. ತಾನು ಈ ಚಿತ್ರದ ರಿಮೇಕ್ ಹಕ್ಕನ್ನು ಅಧಿಕೃತವಾಗಿ ಪಡೆದುಕೊಂಡಿದ್ದೇನೆ ಎಂದು ಕರಣ್ ಜೋಹರ್ ಘೋಷಿಸಿದ್ದರು. ಆದರೆ ಹೊಸ ಚಿತ್ರ ‘ಡಿಯರ್ ಕಾಮ್ರೆಡ್’ನ ರಿಮೇಕ್ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ. ವಿಜಯ್ ದೇವರಕೊಂಡ ನಟಿಸಲಿರುವ ಹೊಸ ಚಿತ್ರವನ್ನು ತನ್ನ ಧರ್ಮಾ ಪ್ರೊಡಕ್ಷನ್ ನಿರ್ಮಾಣ ಮಾಡುತ್ತಿದೆ ಎಂದು ಕರಣ್ ಜೋಹರ್ ಹೇಳಿದ್ದರು. ಈ ಚಿತ್ರದಲ್ಲಿ ಬಾಹುಬಲಿ ಖ್ಯಾತಿಯ ರಮ್ಯ ಕೃಷ್ಣಾ ಹಾಗೂ ರೋನಿತ್ ರಾಯ್ ಕೂಡ ನಟಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ. ‘ಪೋಕಿರಿ’ ಖ್ಯಾತಿಯ ಪುರಿ ಜಗನ್ನಾತ್ ನಿರ್ದೇಶನದ ಚಿತ್ರಕ್ಕೆ ‘ಫೈಟರ್’ ಎಂದು ಹೆಸರಿಡಲಾಗಿದೆ. ಇದರಲ್ಲಿ ಮಾರ್ಷಲ್ ಆರ್ಟ್ಸ್‌ಗೆ ಪ್ರಾಮಖ್ಯತೆ ನೀಡಲಾಗಿದೆ. ಈ ಚಿತ್ರದ ಚಿತ್ರೀಕರಣ ಮುಂಬೈಯಲ್ಲಿ ಈಗಾಗಲೇ ಆರಂಭವಾಗಿದೆ. ಈ ಚಿತ್ರಕ್ಕಾಗಿ ವಿಜಯ್ ದೇವರ ಕೊಂಡ ಅವರಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ. ಅಲ್ಲದೆ ಕಟ್ಟುನಿಟ್ಟಾಗಿ ಡಯಟ್ ಅನುಸರಿಸಲು ಸೂಚಿಸಲಾಗಿದೆ ಎಂದು ರೋನಿತ್ ತಿಳಿಸಿದ್ದಾರೆ. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)