ನಾಳೆ ವಿ.ಕೆ. ಫರ್ನಿಚರ್ಸ್-ಇಲೆಕ್ಟ್ರಾನಿಕ್ಸ್ನ ತೊಕ್ಕೊಟ್ಟು ಶೋರೂಂ ಶುಭಾರಂಭ
ಮಂಗಳೂರು, ಜ.28: ಅತ್ಯಾಧುನಿಕ ಪೀಠೋಪಕರಣ ಹಾಗೂ ಗೃಹೋಪಯೋಗಿ ಸಾಮಗ್ರಿಗಳ ಉತ್ಪನ್ನಗಳಿಗೆ ಹೆಸರುವಾಸಿಯಾಗಿರುವ ವಿ.ಕೆ. ಫರ್ನಿಚರ್ ಮತ್ತು ಇಲೆಕ್ಟ್ರಾನಿಕ್ಸ್ನ ನೂತನ ಹವಾನಿಯಂತ್ರಿತ ಶೋರೂಂ ತೊಕ್ಕೊಟ್ಟುವಿನ ಕಲ್ಲಾಪುವಿನಲ್ಲಿ ಜ.29ರಂದು ಬೆಳಗ್ಗೆ 9ಕ್ಕೆ ಉದ್ಘಾಟನೆಗೊಳ್ಳಲಿದೆ.
ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲು ನೂತನ ಶೋರೂಂನ್ನು ಉದ್ಘಾಟಿಸಲಿದ್ದಾರೆ.
ಅತಿಥಿಗಳಾಗಿ ಶಾಸಕರಾದ ಯು.ಟಿ. ಖಾದರ್, ವೇದವ್ಯಾಸ ಕಾಮತ್, ಉಳ್ಳಾಲ ಜುಮಾ ಮಸೀದಿ ಹಾಗೂ ಸೈಯದ್ ಮದನಿ ದರ್ಗಾದ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್, ಸೋಮೇಶ್ವರ ಸೋಮನಾಥ ದೇವಸ್ಥಾನ ಹಾಗೂ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ವಿಶ್ವನಾಥ ಗಟ್ಟಿ ವಗ್ಗ, ಪೆರ್ಮನ್ನೂರು ಸಂತ ಸೆಬಾಸ್ಟಿಯನ್ ಚರ್ಚ್ನ ಯಾಜಕ ರೆ.ಡಾ.ಜಾನ್ ಬಾಪ್ಟಿಸ್ಟ್ ಸಲ್ದಾನ, ರಘುರಾಮ ರೈ ಮುಂಬೈ ಉಳ್ಳಾಲಗುತ್ತು, ಉಳ್ಳಾಲ ನಗರಸಭೆ ಸದಸ್ಯೆ ಕಮರುನ್ನೀಸ ಆಸಿಫ್ ಮತ್ತಿತರು ಪಾಲ್ಗೊಳ್ಳಲಿದ್ದಾರೆ.
ತೊಕ್ಕೊಟ್ಟುವಿನ ಈ ನೂತನ ಶೋರೂಂ ಮೂರು ಮಹಡಿಗಳನ್ನು ಹೊಂದಿದ್ದು, ಕೆಳ ಅಂತಸ್ತಿನಲ್ಲಿ ಡೈನಿಂಗ್ ಟೇಬಲ್ಸ್, ಎಲ್ಲ ಮಾದರಿಯ ಸೋಫಾ ಸೆಟ್ಸ್, ಆಧುನಿಕ ವಿನ್ಯಾಸದ ಬೆಡ್ರೂಂ ಸೆಟ್ ವಿದ್ ಮ್ಯಾಟ್ರೆಸ್, ಕಾಟ್ಸ್, ಎಲ್ಲ ಮಾದರಿಯ ಗೃಹ ಅಲಂಕಾರಿಕ ವಸ್ತುಗಳು, ಡ್ರೆಸ್ಸಿಂಗ್ ಟೇಬಲ್ಗಳು ಮತ್ತು ಮಿರರ್ಸ್, ವಿವಿಧ ರೀತಿಯ ಗಡಿಯಾರ ಮತ್ತು ಫೋಟೊ ಫ್ರೇಮ್ಸ್, ವಾಲ್ ಡೆಕೋರೇಟಿವ್ಸ್, ಎಲ್ಲ ಮಾದರಿಯ ಔಟ್ಡೋರ್ ಫರ್ನಿಚರ್ಸ್ಗಳನ್ನು ಒಳಗೊಂಡಿದೆ.
ಮೊದಲ ಅಂತಸ್ತಿನಲ್ಲಿ ಆ್ಯಂಡ್ರಾಯ್ಡಾ ಎಲ್ಇಡಿ, ಇಲೆಕ್ಟ್ರಾನಿಕ್ಸ್ ಸಾಮಗ್ರಿಗಳಾದ ವಾಶಿಂಗ್ ಮೆಶಿನ್, ರೆಫ್ರಿಜರೇಟರ್, ಮೊಬೈಲ್, ಲ್ಯಾಪ್ಟಾಪ್ಗಳು ಹಾಗೂ ಗೃಹೋಪಯೋಗಿ ವಸ್ತುಗಳಾದ ಡೋರ್ ಮ್ಯಾಟ್ಸ್, ಬೆಡ್ಶೀಟ್ಸ್, ಕರ್ಟನ್ಸ್, ಬ್ಲೈಂಡ್ಸ್, ಹೋಮ್ ಇಂಟಿಯರ್ ಸೆಕ್ಷನ್, ಹೋಮ್ ಅಪ್ಲಾಯನ್ಸೆಸ್, ಕಿಚನ್ವೇರ್ಗಳ ಅಪಾರ ಸಂಗ್ರಹವಿದೆ.
ಎಲ್ಲ ಮಾದರಿಯ ಕಚೇರಿ ಪೀಠೋಪಕರಣಗಳು, ಕುರ್ಚಿಗಳೂ, ಬೆಡ್ರೂಂ ಸೆಟ್ಗಳು, ವಾಡ್ರೋಬ್ಸ್, ದೇವರ ಮಂಟಪಗಳು ಹಾಗೂ ಮ್ಯಾಟ್ರೆಸಸ್ಗಳ ಸಂಗ್ರಹವನ್ನು ಹೊಂದಿದೆ ಎಂದು ವಿ.ಕೆ. ಫರ್ನಿಚರ್ಸ್ -ಇಲೆಕ್ಟ್ರಾನಿಕ್ಸ್ ಸಂಸ್ಥೆಯ ಪ್ರಕಟನೆ ತಿಳಿಸಿದೆ.