ಭೂಸ್ಪರ್ಶದ ವೇಳೆ ಸ್ಕಿಡ್ ಆಗಿ ಹೆದ್ದಾರಿಗೆ ನುಗ್ಗಿದ ವಿಮಾನ
ಟೆಹ್ರಾನ್: ಒಟ್ಟು 144 ಪ್ರಯಾಣಿಕರನ್ನು ಹೊತ್ತ ಇರಾನ್ ದೇಶದ ಹಳೆಯ ಪ್ಯಾಸೆಂಜರ್ ವಿಮಾನವೊಂದು ಸೋಮವಾರ ರನ್-ವೇಯಲ್ಲಿ ಇಳಿಯುವ ವೇಳೆ ಸ್ಕಿಡ್ ಆಗಿ ಅಪಘಾತಕ್ಕೀಡಾಗಿ ವಿಮಾನ ನಿಲ್ದಾಣದ ಹತ್ತಿರದ ಪ್ರಮುಖ ಹೆದ್ದಾರಿಗೆ ನುಗ್ಗಿದ ಘಟನೆ ವರದಿಯಾಗಿದೆ.
ಇರಾನ್ನ ಖುಝೆಸ್ತಾನ್ ಪ್ರಾಂತ್ಯದ ಮಹಶಹರ್ ನಗರದಲ್ಲಿ ಈ ಘಟನೆ ನಡೆದಿದ್ದು ಕಾಸ್ಪಿಯನ್ ಏರ್ ಲೈನ್ಸ್ಗೆ ಸೇರಿದ ಈ ಮೆಕ್ಡೊನ್ನೆಲ್ ಡೌಗ್ಲಾಸ್ ಎಂಡಿ-83 ವಿಮಾನ ಅಪಘಾತದಲ್ಲಿ ಇಬ್ಬರು ಗಾಯಗೊಂಡಿದ್ದಾರೆ.
ಘಟನೆಯಿಂದ ಆಘಾತಗೊಂಡ ವಿಮಾನದ ಪ್ರಯಾಣಿಕರು ಕಾಕ್ ಪಿಟ್ ಸಮೀಪದ ಹಾಗೂ ವಿಮಾನದ ರೆಕ್ಕೆಯ ಸಮೀಪದ ಇನ್ನೊಂದು ಬಾಗಿಲಿನಿಂದ ಹೊರಬಂದರು.
ಟೆಹ್ರಾನ್ನಿಂದ ಹೊರಟಿದ್ದ ಈ ವಿಮಾನದ ಎಲ್ಲಾ ಪ್ರಯಾಣಿಕರೂ ಸುರಕ್ಷಿತರಾಗಿದ್ದಾರೆ ಎಂದು ವಿಮಾನ ನಿಲ್ದಾಣದ ನಿರ್ದೇಶಕರು ತಿಳಿಸಿದ್ದಾರೆ.
ಅದೃಷ್ಟವಶಾತ್ ವಿಮಾನ ಹೆದ್ದಾರಿಗೆ ನುಗ್ಗಿದ ಸ್ಥಳದಲ್ಲಿ ವಾಹನಗಳು ಹಾಗೂ ಜನರಿರಲಿಲ್ಲ. ವಿಮಾನ ರನ್-ವೇ ಮುಟ್ಟಬೇಕೆನ್ನುವಷ್ಟರಲ್ಲಿ ಲ್ಯಾಂಡಿಂಗ್ ಗೇರ್ ಅನ್ನು ಕಳೆದುಕೊಂಡಿತ್ತೆನ್ನಲಾಗಿದೆ. ಇದು ಸುಮಾರು 25 ವರ್ಷ ಹಳೆಯ ವಿಮಾನವಾಗಿದೆ.
This one shows people getting off. Scary how so many are just hanging around the plane. #Iran pic.twitter.com/x0psWZY7Ql
— Bahman Kalbasi (@BahmanKalbasi) January 27, 2020
Dramatic footage of a passenger plane belonging to #Iran’s Caspian airline landing in the middle of the street in Mahshahr (same city that many were killed in Nov. protest) this happened in the last hour. Witness who got the footage didn’t know if there were any casualties. pic.twitter.com/oa6ghmT8bu
— Bahman Kalbasi (@BahmanKalbasi) January 27, 2020
Eye witness sending me these images says all passengers got off the plane. #Iran #Mahshahr #CaspianAirline pic.twitter.com/1jT608cOOp
— Bahman Kalbasi (@BahmanKalbasi) January 27, 2020