ಕೊರೋನವೈರಸ್ ವಿರುದ್ಧ ಗಂಭೀರ ಯುದ್ಧ: ಜಿನ್ ಪಿಂಗ್
ಬೀಜಿಂಗ್, ಜ. 28: ಕೊರೋನವೈರಸ್ ಸೋಂಕು ಎಂಬ ಭೂತದ ವಿರುದ್ಧ ಚೀನಾವು ಗಂಭೀರ ಯುದ್ಧದಲ್ಲಿ ತೊಡಗಿದೆ ಎಂದು ಆ ದೇಶದ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಮಂಗಳವಾರ ಹೇಳಿದ್ದಾರೆ ಹಾಗೂ ರೋಗವನ್ನು ನಿಯಂತ್ರಿಸುವ ಸರಕಾರದ ಪ್ರಯತ್ನಗಳಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವುದಾಗಿ ಅವರು ಪ್ರಮಾಣ ಮಾಡಿದ್ದಾರೆ.
‘‘ಈ ಸಾಂಕ್ರಾಮಿಕ ರೋಗವು ಭೂತವಾಗಿದೆ. ಈ ಭೂತ ಅಡಗಿಕೊಳ್ಳಲು ನಾವು ಅವಕಾಶ ನೀಡಲು ಸಾಧ್ಯವಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್ಒ)ಯ ಅಧ್ಯಕ್ಷರೊಂದಿಗೆ ನಡೆದ ಸಭೆಯಲ್ಲಿ ಜಿನ್ಪಿಂಗ್ ಹೇಳಿದರು ಎಂದು ಸರಕಾರಿ ಮ್ಯಾಮ ವರದಿ ಮಾಡಿದೆ.
‘‘ಸಾಂಕ್ರಾಮಿಕ ರೋಗಗಳಿಗೆ ಸಂಬಂಧಿಸಿ ದೇಶದೊಳಗೆ ಮತ್ತು ವಿದೇಶಗಳಿಗೆ ಸರಿಯಾದ ಸಮಯದಲ್ಲಿ ಮಾಹಿತಿಯನ್ನು ನೀಡುವ ಮುಕ್ತ, ಪಾರದರ್ಶಕ ಮತ್ತು ಜವಾಬ್ದಾರಿಯುತ ಧೋರಣೆಯನ್ನು ಚೀನಾ ಸರಕಾರ ಯಾವತ್ತೂ ಪಾಲಿಸಿಕೊಂಡು ಬಂದಿದೆ’’ ಎಂದು ಜಿನ್ಪಿಂಗ್ ನುಡಿದರು.
Next Story