varthabharthi

ಗಲ್ಫ್ ಸುದ್ದಿ

ಯುಎಇಯಲ್ಲಿ ದೃಢಪಟ್ಟ ಮೊದಲ ಕೊರೋನಾವೈರಸ್ ಪ್ರಕರಣ

ವಾರ್ತಾ ಭಾರತಿ : 29 Jan, 2020

ಅಬುಧಾಬಿ: ಚೀನಾದ ವುಹಾನ್ ನಗರದಿಂದ ಹಿಂದಿರುಗಿದ ಕುಟುಂಬದ ಸದಸ್ಯರಿಗೆ  ಮಾರಕ ಕೊರೋನಾವೈರಸ್ ಸೋಂಕು ತಗಲಿರುವುದು ದೃಢಪಟ್ಟಿದೆ ಎಂದು  ಸಂಯುಕ್ತ ಅರಬ್ ಸಂಸ್ಥಾನದ  ಆರೋಗ್ಯ ಸಚಿವಾಲಯ ಹೇಳಿಕೆ ನೀಡಿದೆ. 

ಈ ವೈರಸ್ ಬಾಧಿತರಾದವರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು ಅವರು ವೈದ್ಯಕೀಯ ನಿಗಾದಲ್ಲಿದ್ದಾರೆಂದು ಸಚಿವಾಲಯ ತಿಳಿಸಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಯಂತೆ ದೇಶದ ಆರೋಗ್ಯ ಸಚಿವಾಲಯ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳುತ್ತಿದೆ ಎಂದು ಹೇಳಿದ ಸಚಿವಾಲಯ  ಬಾಧಿತರಾದವರ ಆರೋಗ್ಯ ಸ್ಥಿತಿ ಯಾವುದೇ ರೀತಿಯಲ್ಲಿ ಕಳವಳಕಾರಿಯಾಗಿಲ್ಲ'' ಎಂದು ತಿಳಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)