varthabharthi

ಸಿನಿಮಾ

ಅವರು ರೇಟಿಂಗ್ ಬದಲಿಸಿರಬಹುದು, ನನ್ನ ಮನಸ್ಸನ್ನಲ್ಲ: 'ಚಪಾಕ್' ವಿರುದ್ಧದ ಅಪಪ್ರಚಾರದ ಬಗ್ಗೆ ದೀಪಿಕಾ

ವಾರ್ತಾ ಭಾರತಿ : 30 Jan, 2020

ಹೊಸದಿಲ್ಲಿ: ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದಲ್ಲಿ ಸಿಎಎ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆಗೆ ಬೆಂಬಲ ಸೂಚಿಸಿದ ಬಳಿಕ ದೀಪಿಕಾ ಪಡುಕೋಣೆಯವರ 'ಚಪಾಕ್' ಚಿತ್ರದ ಬಗ್ಗೆ ವ್ಯಾಪಕ ಅಪಪ್ರಚಾರ ನಡೆಸಲಾಗಿದೆ.

ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ದೀಪಿಕಾ ಭೇಟಿ ಮಾಡಿದ ತಕ್ಷಣ 'ಚಪಾಕ್' ಚಿತ್ರದ ಐಎಂಡಿಬಿ ರೇಟಿಂಗ್  ಕುಸಿದಿತ್ತು. ಟ್ರೋಲ್ ಗಳು ದೊಡ್ಡ ಸಂಖ್ಯೆಯಲ್ಲಿ ಚಿತ್ರದ ಬಗ್ಗೆ ಡೌನ್‍ ವೋಟಿಂಗ್ ಮಾಡಿದ್ದರು.

ಟ್ವಿಟರ್‍ನಲ್ಲಿ ಅವರ ಅಭಿಮಾನಿಗಳ ಕ್ಲಬ್ ಶೇರ್ ಮಾಡಿರುವ ವಿಡಿಯೊದಲ್ಲಿ ದೀಪಿಕಾ ತಮ್ಮ ಟೀಕಾಕಾರರ ವಿರುದ್ಧ ಸ್ಪಷ್ಟ ಸಂದೇಶ ನೀಡಿದ್ದಾರೆ. "ಅವರು ನನ್ನ ಐಎಂಡಿಬಿ ರೇಟಿಂಗ್ ಬದಲಿಸಿರಬಹುದು; ಆದರೆ ಮನಸ್ಸನ್ನಲ್ಲ" ಎಂದು ವಿಡಿಯೊ ಸಂದೇಶದಲ್ಲಿ ದೀಪಿಕಾ ಹೇಳಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)