varthabharthi

ಗಲ್ಫ್ ಸುದ್ದಿ

​ದಮ್ಮಾಮ್: ಇಂಡಿಯನ್ ಸೋಶಿಯಲ್ ಫೋರಂ ವತಿಯಿಂದ ಗಣರಾಜ್ಯೋತ್ಸವ ಸಮಾರಂಭ

ವಾರ್ತಾ ಭಾರತಿ : 31 Jan, 2020

ದಮ್ಮಾಮ್, ಜ.31:  ಇಂಡಿಯನ್ ಸೋಷಿಯಲ್ ಫೋರಂ, ಪೂರ್ವ ಪ್ರಾಂತ್ಯ ಕೇಂದ್ರ ಸಮಿತಿಯ  ವತಿಯಿಂದ  ಜನವರಿ 26ರಂದು ಅಲ್ ರಯಾನ್ ಪಾಲಿ ಕ್ಲಿನಿಕ್ ಉಪಹಾರ ಗೃಹದ ಸಭಾಂಗಣದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಇಂಡಿಯನ್ ಇಂಟರ್  ನ್ಯಾಷನಲ್ ಸ್ಕೂಲ್ ಇದರ ಮಾಜಿ ಚೇರ್ಮನ್ ಅಬ್ದುಲ್ ವಾರಿಸ್ ಕಾರ್ಯಕ್ರಮ ಉದ್ಘಾಟಿಸಿದರು.

 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಇಂಡಿಯನ್ ಸೋಷಿಯಲ್ ಫೋರಂ ಪೂರ್ವ ಪ್ರಾಂತ್ಯ ಕೇಂದ್ರ ಸಮಿತಿ ಅಧ್ಯಕ್ಷ  ವಾಸಿಂ ರಬ್ಬಾನಿ, ಸದ್ಯದ ಪರಿಸ್ಥಿತಿಯಲ್ಲಿ  ಭಾರತೀಯ ಸಂವಿಧಾನದ ಮೂಲ ತತ್ವಗಳು ಅಪಾಯವನ್ನು ಎದುರಿಸುತ್ತಿರುವ ಕುರಿತು ಮಾತನಾಡಿದರು.

ಇಂಡಿಯನ್ ಸೋಶಿಯಲ್ ಫೋರಂ ದಿಲ್ಲಿ ಪ್ರಾಂತ್ಯ ಅಧ್ಯಕ್ಷ ಮನ್ಸೂರ್ ಷಾ, ಇಂಡಿಯಾ ಫ್ರಟರ್ನಿಟಿ ಫೋರಂ ದಮ್ಮಾಮ್ ಕೇರಳ ರಾಜ್ಯ ಸಮಿತಿಯ ಸದಸ್ಯ ಅಮೀರ್ ಮೌಲವಿ,  ಡಾ.ಫಯಾಝ್  ಬೆಂಗಳೂರು, ಐ.ಎಸ್.ಎಫ್. ದಮ್ಮಾಮ್ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷ ಮುಹಮ್ಮದ್ ಶರೀಫ್, ಕೇರಳ ರಾಜ್ಯ ಘಟಕದ ಅಧ್ಯಕ್ಷ ನಾಸಿರ್ ಕೊಡುವಳ್ಳಿ, ತಮಿಳುನಾಡು ಅಧ್ಯಕ್ಷ ಜಹಾಂಗೀರ್ ಮೌಲವಿ  ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.

ಐ.ಎಸ್.ಎಫ್. ಕೇಂದ್ರ ಸಮಿತಿಯ ಸದಸ್ಯ ನಮೀರ್ ಕೇರಳ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಅಶ್ರಫ್ ಕರ್ನಾಟಕ ವಂದಿಸಿದರು ಮತ್ತು ಕಾರ್ಯದರ್ಶಿ ತಾಹಿರ್ ಹೈದೆರಾಬಾದ್ ಕಾರ್ಯಕ್ರಮ ನಿರೂಪಿಸಿದರು. ಜುಬೈಲ್ ರಾಜ್ಯ ಘಟಕದ ಅಧ್ಯಕ್ಷ ಮುಹಮ್ಮದ್ ಫಿರೋಝ್ ಸಂವಿಧಾನದ ಪೀಠಿಕೆಯನ್ನು ಬೋಧಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)