varthabharthi

ಗಲ್ಫ್ ಸುದ್ದಿ

ಕನಿಷ್ಠ 10 ನಾವಿಕರು ನಾಪತ್ತೆ

ಯುಇಎ: ಹಡಗಿನಲ್ಲಿ ಬೆಂಕಿ ದುರಂತ; ಇಬ್ಬರು ಭಾರತೀಯರ ಮೃತ್ಯು

ವಾರ್ತಾ ಭಾರತಿ : 31 Jan, 2020

ದುಬೈ, ಜ.31: ಯುಎಇ ಕರಾವಳಿಯಲ್ಲಿ ಬುಧವಾರ ಪನಾಮಾ ಧ್ವಜವನ್ನು ಹೊಂದಿದ್ದ ಟ್ಯಾಂಕರ್ ಹಡಗೊಂದರಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಇಬ್ಬರು ಭಾರತೀಯ ನಾಗರಿಕರು ಮೃತಪಟ್ಟಿದ್ದಾರೆ ಹಾಗೂ ಇತರ ಕನಿಷ್ಠ 10 ಮಂದಿ ನಾಪತ್ತೆಯಾಗಿದ್ದಾರೆಂದು ಮಾಧ್ಯಮ ವರದಿಯೊಂದು ಶುಕ್ರವಾರ ತಿಳಿಸಿದೆ.

ಯುಎಇ ಕರಾವಳಿಯಿಂದ 21 ಮೈಲು ದೂರದ ಸಮುದ್ರ ಪ್ರದೇಶದಲ್ಲಿ ಈ ದುರಂತ ಬುಧವಾರ ಸಂಜೆ ಸಂಭವಿಸಿರುವುದಾಗಿ ವರದಿಯು ತಿಳಿಸಿದೆ. ಆದಾಗ್ಯೂ ಅಗ್ನಿಶಾಮಕದಳ ನೆರವಿನಿಂದ ಹಡಗಿಗೆ ಹತ್ತಿಕೊಂಡಿದ್ದ ಬೆಂಕಿಯನ್ನು ನಿಯಂತ್ರಿಸಲಾಯಿತೆಂದು ಅದು ಹೇಳಿದೆ.

ಅಗ್ನಿಅನಾಹುತದಲ್ಲಿ ನಾಪತ್ತೆಯಾದ ವ್ಯಕ್ತಿಗಳನ್ನು ಪತ್ತೆಹಚ್ಚುವ ಕಾರ್ಯ ನಡೆದಿದೆಯೆಂದು ವರದಿಗಳು ತಿಳಿಸಿವೆ. ಹಡಗಿನ ಸಿಬ್ಬಂದಿಯಿಂದ ಅಪಾಯದ ಕರೆ ದೊರೆತ ತಕ್ಷಣವೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ ಹಾಗೂ ಟ್ಯಾಂಕರ್‌ನ ಸಿಬ್ಬಂದಿಯನ್ನು ರಕ್ಷಿಸಿದ್ದಾರೆಂದು ಅಧಿಕೃತ ಮೂಲಗಳು ತಿಳಿಸಿವೆ.

ದುರ್ಘಟನೆ ನಡೆದ ಸಂದರ್ಭದಲಿ ಹಡಗಿನಲ್ಲಿ ಕನಿಷ್ಠ 55 ಮಂದಿಯಿದ್ದರೆಂದು ತಿಳಿದುಬಂದಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)