varthabharthi

ನಿಧನ

ಡಾ. ದೇಜಪ್ಪ ದಲ್ಲೋಡಿ

ವಾರ್ತಾ ಭಾರತಿ : 1 Feb, 2020

ಮೂಡುಬಿದಿರೆ: ಹಿರಿಯ ಸಾಹಿತಿ, ವಿಶ್ರಾಂತ ಪ್ರಾಧ್ಯಾಪಕ ಡಾ. ಎಂ. ದೇಜಪ್ಪ ದಲ್ಲೋಡಿ (74) ಅಲ್ಪ ಕಾಲದ ಅಸೌಖ್ಯದಿಂದ ಮಾಸ್ತಿಕಟ್ಟೆಯ ತಮ್ಮ ನಿವಾಸದಲ್ಲಿ ಜ.30ರಂದು ನಿಧನ ಹೊಂದಿದರು. ಅವರು ಪತ್ನಿ, ಓರ್ವ ಪುತ್ರ, ಪುತ್ರಿಯನ್ನು ಅಗಲಿದ್ದಾರೆ. 

ಮೂಲತಃ ಮುತ್ತೂರು ಗ್ರಾಮದ ದಲ್ಲೋಡಿಯವರಾದ ಡಾ. ದೇಜಪ್ಪ ಅವರು ಎಂ.ಎ.ಪದವೀಧರರಾಗಿ ಸುಂಕದಕಟ್ಟೆಯ ಶ್ರೀ ನಿರಂಜನ ಸ್ವಾಮಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ಬಳಿಕ ಮ್ಯಾತ್ಸ್ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಅವರು ಸೇವೆ ಸಲ್ಲಿಸಿದ್ದರು.

'ಬಿಲ್ಲವ ಸಾಂಸ್ಕøತಿಕ ಸಂಪದ' ತಮ್ಮ ಸಂಶೋಧನಾ ಮಹಾಪ್ರಬಂಧದ ರೂಪದಲ್ಲಿ ಉಪಯುಕ್ತ ಕೃತಿಯನ್ನು ರಚಿಸಿದ್ದಾರೆ. ಕೃಷಿಕರಾಗಿಯೂ ಗುರುತಿಸಿಕೊಂಡಿದ್ದ ಅವರು ಸಾಹಿತ್ಯ ರಂಗದಲ್ಲಿಯೂ ಕೆಲವು ಕೃತಿಗಳನ್ನು ಪ್ರಕಟಿಸಿದ್ದಾರೆ. ಅವರು  'ಭಾಮಿನಿಷಟ್ಪದಿಯಲ್ಲಿ ರಚಿಸಿದ ಶ್ರೀ ರಾಜರಾಜೇಶ್ವರೀ ದರ್ಶನಂ ಭಾವಾಥ ಸಹಿತ ಮಹಾಕಾವ್ಯವು ಕಳೆದ ವರ್ಷ ಶ್ರೀ ಕ್ಷೇತ್ರ ಪೊಳಲಿಯ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಲೋಕಾರ್ಪಣೆಯಾಗಿತ್ತು. ಶ್ರೀ ಕ್ಷೇತ್ರ ಧರ್ಮಸ್ಥಳ ಕುರಿತಂತೆ ಅವರು ಹೊಸದಾಗಿ ಕೃತಿ ರಚನೆಯಲ್ಲಿ ತೊಡಗಿಕೊಂಡಿದ್ದರು ಎನ್ನಲಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)