varthabharthi

ಗಲ್ಫ್ ಸುದ್ದಿ

ಯುಎಇ ಇಶಾರ ಚಂದಾ ಅಭಿಯಾನಕ್ಕೆ ಚಾಲನೆ

ವಾರ್ತಾ ಭಾರತಿ : 5 Feb, 2020

ಯುಎಇ, ಫೆ.5: 'ಸಂಸ್ಕೃತಿಯ ರಕ್ಷಣೆಗೆ ಅಕ್ಷರ ಕ್ರಾಂತಿಯ ಕೊಡುಗೆ' ಯುಎಇ ಇಶಾರ ಚಂದಾ-2020 ಅಭಿಯಾನದ ಉದ್ಘಾಟನಾ ಸಮಾರಂಭವು ಇತ್ತೀಚೆಗೆ ಫೀಸ್ ಇಂಟರ್'ನ್ಯಾಷನಲ್ ಸ್ಕೂಲ್ ಆಡಿಟೋರಿಯಂ ಶಾರ್ಜಾ ಪ್ರತಿಭೋತ್ಸವ ವೇದಿಕೆಯಲ್ಲಿ ನಡೆಯಿತು.

ಕೆಸಿಎಫ್ ಯುಎಇ ರಾಷ್ಟ್ರೀಯ ಪಬ್ಲಿಕೇಷನ್ ಅಧ್ಯಕ್ಷ ಅಬ್ದುಲ್ ಕರೀಂ ಮುಸ್ಲಿಯಾರ್ ಅವರು ಸಿ.ಎ ಅಬ್ದುಲ್ಲ ಮುದಮುಲೈರವರಿಗೆ ಇಶಾರ ಪತ್ರಿಯನ್ನು ನೀಡುವ ಮೂಲಕ ಚಂದಾ ಅಭಿಯಾನವನ್ನು ಉದ್ಘಾಟಿಸಲಾಯಿತು.

ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರದ ಮಾಜಿ ಸಚಿವ ಸಿ.ಎಂ ಇಬ್ರಾಹಿಂ, ದ.ಕ ಮುಸ್ಲಿಂ ಜಮಾಅತ್ ಪ್ರ.ಕಾರ್ಯದರ್ಶಿ ಮುಮ್ತಾಝ್ ಅಲಿ ಕೃಷ್ಣಾಪುರ, ಕೆಸಿಎಫ್ ಯುಎಇ ರಾಷ್ಟ್ರೀಯ ಅಧ್ಯಕ್ಷ ಅಬ್ದುಲ್ ಜಲೀಲ್ ನಿಝಾಮಿ, ಕೆಸಿಎಫ್ ಐ.ಎನ್.ಸಿ ಫಿನಾಸ್ಸಿಯಲ್ ಕಂಟ್ರೊಲರ್ ಹಮೀದ್ ಸಹದಿ ಈಶ್ವರಮಂಗಲ, ಪಬ್ಲಿಕೇಷನ್ ಕಾರ್ಯದರ್ಶಿ ಅಬ್ದುಲ್ ಹಕೀಮ್ ತುರ್ಕಳಿಕೆ, ಇಬ್ರಾಹಿಂ ಸಖಾಫಿ ಕೆದುಂಬಾಡಿ, ಕೆಸಿಎಫ್ ಯುಎಇ ರಾಷ್ಟ್ರೀಯ ಕಾರ್ಯದರ್ಶಿ ಮೂಸಾ ಹಾಜಿ ಬಸರ, ಇಬ್ರಾಹಿಂ ಬ್ರೈಟ್ ಮಾರ್ಬಲ್, ಉಸ್ಮಾನ್ ಹಾಜಿ ಹಾಗೂ ಇಕ್ಬಾಲ್ ಕಾಜೂರ್ ಸೇರಿ ಅನೇಕ ಮಂದಿ ಉಪಸ್ಥಿತರಿದ್ದರು.

ಇಶಾರ ಪತ್ರಿಕೆ ಯುಎಇಯಲ್ಲಿ 4ನೇ ವರ್ಷವನ್ನು ಪೂರ್ತಿಗೊಳಿಸಿದ್ದು, 5ನೇ ವರ್ಷಕ್ಕೆ ಪಾದಾರ್ಪಣೆಗೈದಿದೆ. ಪತ್ರಿಕೆಯು ಗಲ್ಫ್ ರಾಷ್ಟ್ರದಾದ್ಯಂತ ಹತ್ತು ಸಾವಿರರಕ್ಕೂ ಮಿಕ್ಕ ಚಂದಾದಾರರನ್ನು ಹೊಂದಿದ್ದು, ವಿದೇಶದಲ್ಲಿ ಅಧಿಕೃತವಾಗಿ ನೋಂದಾವಣೆಗೊಂಡ ಏಕೈಕ ಕನ್ನಡ ಪತ್ರಿಕೆ ಎಂಬ ಹೆಗ್ಗಳಿಕೆಯನ್ನು ಇಶಾರ ಹೊಂದಿದೆ. ಅಭಿಯಾನವು ಫೆಬ್ರವರಿ1 ರಿಂದ 29ರವರೆಗೆ ಯುಎಇ ರಾಷ್ಟ್ರದಾದ್ಯಂತ ಸಕ್ರಿಯವಾಗಿ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)