varthabharthi

ಗಲ್ಫ್ ಸುದ್ದಿ

ಬಹರೈನ್‌: ಭಾರತೀಯ ಸಾಗರೋತ್ತರ ಕಾಂಗ್ರೆಸ್ ವತಿಯಿಂದ ಗಣರಾಜ್ಯೋತ್ಸವ ಆಚರಣೆ

ವಾರ್ತಾ ಭಾರತಿ : 9 Feb, 2020

ಬಹರೈನ್ : ಭಾರತೀಯ ಸಾಗರೋತ್ತರ ಕಾಂಗ್ರೆಸ್(ಐಒಸಿ)ಬಹರೈನ್ ವಲಯದ ವತಿಯಿಂದ 71ನೇ ಗಣರಾಜ್ಯೋತ್ಸವವು ಐಒಸಿ ಅಧ್ಯಕ್ಷ ಮುಹಮ್ಮದ್ ಮನ್ಸೂರ್ ನಾಯಕತ್ವದಲ್ಲಿ ಅರ್ಮಾನ್ ಹೊಟೇಲ್-ಜುಫೈರ್‌ನ ಬ್ಯಾಂಕ್ವೆಟ್ ಹಾಲ್‌ನಲ್ಲಿ ಇತ್ತೀಚೆಗೆ ನಡೆಯಿತು.

ಭಾರತದ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಭಾರತೀಯ ಸಂವಿಧಾನವನ್ನು ಅನುಸರಿಸುವ ಹಾಗೂ ರಕ್ಷಿಸುವ ಕುರಿತಂತೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಎಲ್ಲರೂ ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಮನ್ಸೂರ್ ಅವರು ಸಂವಿಧಾನದ ಪೀಠಿಕೆಯನ್ನು ಓದಿದರು.
ಐಒಸಿ ಪ್ರಧಾನ ಕಾರ್ಯದರ್ಶಿ ಖುರ್ಷಿದ್ ಆಲಂ ಸ್ವಾಗತ ಮಾಡಿದರು.

ಶ್ರೀಕಾಂತ್ ಭಟ್ (ಕರ್ನಾಟಕ),  ಒಐಸಿಸಿ-ಕೇರಳ ಅಧ್ಯಕ್ಷ ಬಿನು ಕುಣ್ಣನ್‌ ಥಾನಂ, ಹಸೈನಾರ್ ಕಲಥಿಂಗಲ್ (ಅಧ್ಯಕ್ಷರು ಕೆಎಂಸಿಸಿ-ಕೇರಳ), ಇಬ್ರಾಹೀ ಆದಂ (ಅಧ್ಯಕ್ಷರು ಒಐಸಿಸಿ ಯೂತ್ ವಿಂಗ್-ಕೇರಳ), ಅನಸ್ ರಹೀಂ (ಅಧ್ಯಕ್ಷರು,ಐವೈಸಿಸಿ), ಸಾಜಿದ್ ವರ್ಸಿ(ಉತ್ತರ ಪ್ರದೇಶ), ಮುಹಮ್ಮದ್ ಇಝರುಲ್ ಹಕ್-ದಿಲ್ಲಿ, ಮುಹಮ್ಮದ್ ಗಯಾಝ್ ಮೈಸೂರು, ಸಾಜ್ಜದ್ ಖಾನ್-ಬಿಹಾರ , ಅಬ್ದುಲ್ ರಹೀಂ-ಹೈದರಾಬಾದ್ ಹಾಗೂ ಐಒಸಿ-ಬಹರೈನ್ ಪದಾಧಿಕಾರಿಗಳಾದ ರಾಜು ಕಲ್ಲುಂಪುರಂ(ಉಪಾಧ್ಯಕ್ಷ), ಸೊವಿಚಾನ್ ಚೆನ್ನತುಸೆರಿ(ಉಪಾಧ್ಯಕ್ಷ), ಜಾಫರ್ ಮೈದಾನಿ ಹಾಗೂ ಸಂತೋಷ್ ಅಸ್ಟಿನ್(ಕಾರ್ಯದರ್ಶಿ)ಸಹಿತ ಭಾರತ ವಿವಿಧ ರಾಜ್ಯಗಳ ಹಲವು ಸಂಘಟನೆಗಳ ಗಣ್ಯರು, ಅಧಿಕಾರಿಗಳು ಹಾಗೂ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಭಾರತೀಯ ಕ್ಲಬ್ ಪ್ರಧಾನ ಕಾರ್ಯದರ್ಶಿ ಜಾಬ್ ಹಾಗೂ ಲಯನ್ಸ್ ಕ್ಲಬ್ ಆಫ್ ರಿಫಾದ ಅಧ್ಯಕ್ಷ ದೇಬಾಶಿಸ್ ಬ್ಯಾನರ್ಜಿ, ಮುಹಮ್ಮದ್ ಮುಸ್ಲಿಯಾರ್, ಗಫೂರ್ ಕೈಪಮಂಗಲತ್(ಕೆಎಂಸಿಸಿ, ಉಪಾಧ್ಯಕ್ಷ) ಹಾಗೂ ಒಐಸಿಸಿ ಹಾಗೂ ಐಒಸಿಸಿಯ ವಿವಿಧ ನಾಯಕರು ಪಾಲ್ಗೊಂಡಿದ್ದರು.

ಬಶೀರ್ ಅಂಬಲಾವಿ(ಪ್ರಧಾನ ಕಾರ್ಯದರ್ಶಿ ಐಒಸಿ)ಧನ್ಯವಾದ ಸಮರ್ಪಿಸಿದರು. ಶರ್ವಾನಿ ಮಂಜುನಾಥ ಹಾಗೂ ಮಾಸ್ಟರ್ ಮಾನ್ವಿತ್ ದೇಶಭಕ್ತಿಗೀತೆಯನ್ನು ಹಾಡಿದರು. ಕಾರ್ಯಕ್ರಮವನ್ನು ಇಂಡಿಯನ್ ಸ್ಕೂಲ್ ಇಸಿಯ ಮಾಜಿ ಕಾರ್ಯದರ್ಶಿ, ಕವಿಯತ್ರಿ ಹಾಗೂ ಬಹರೈನ್ ಯೂನಿವರ್ಸಿಟಿಯ ಪ್ರೊ. ಶಾವಿುಲಿ ಪಿ.ಜಾನ್ ನಿರೂಪಿಸಿದರು.

ಜನವರಿ 30 ಮಹಾತ್ಮಗಾಂಧಿಯ ಹುತಾತ್ಮ ದಿನದ ಹಿನ್ನೆಲೆಯಲ್ಲಿ ಮಹಾತ್ಮ ಗಾಂಧೀಜಿ ಅವರ ಕುರಿತ ಸಾಕ್ಷಚಿತ್ರವನ್ನು ಪ್ರದರ್ಶಿಸಿ,ಗೌರವ ಅರ್ಪಿಸುವ ಮೂಲಕ ಕಾರ್ಯಕ್ರಮವನ್ನು ಕೊನೆಗೊಳಿಸಲಾಯಿತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)