varthabharthi


ರಾಷ್ಟ್ರೀಯ

ಚುನಾವಣೆ ಗೆಲುವಿನ ದಿನವೇ ಕೇಜ್ರಿವಾಲ್ ಮನೆಯಲ್ಲಿ ಮತ್ತೊಂದು ಸಂಭ್ರಮ !

ವಾರ್ತಾ ಭಾರತಿ : 11 Feb, 2020

ಹೊಸದಿಲ್ಲಿ: ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಜಯ ಗಳಿಸಿದ ಆಪ್ ಪಾಳಯದಲ್ಲಿ ಇಂದು ಇನ್ನೊಂದು  ಖುಷಿಯ ವಿಚಾರವೂ ಇದೆ. ಮುಖ್ಯಮಂತ್ರಿ ಹಾಗೂ ಆಪ್ ವಿಜಯದ ರೂವಾರಿ ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಕೇಜ್ರಿವಾಲ್ ಅವರ 54ನೇ ಹುಟ್ಟುಹಬ್ಬ ಕೂಡ ಇಂದೇ ಆಗಿದೆ. ಇದು ಆಪ್ ಕಾರ್ಯಕರ್ತರ ಖುಷಿಯನ್ನು  ಇಮ್ಮಡಿಯಾಗಿಸಿದೆ.

ರಾಜಧಾನಿಯ ಆಪ್ ಕಚೇರಿಯಲ್ಲಿ ಇಂದು ಅರವಿಂದ್ ಕೇಜ್ರಿವಾಲ್ ಹಾಗೂ ಅವರ ಪತ್ನಿ ಸುನೀತಾ ಕೇಕ್ ಕತ್ತರಿಸಿ ಸಂಭ್ರಮಿಸಿದರೆ ಅವರ ಮಕ್ಕಳಾದ ಹರ್ಷಿತಾ ಹಾಗೂ ಪುಲ್ಕಿತ್ ಹಾಗೂ ಆಪ್ ಕಾರ್ಯಕರ್ತರು ಸಂತಸದ ಹಾಗೂ ವಿಜಯದ ನಗೆ ಬೀರುತ್ತಿದ್ದರು.

ಮಾಜಿ ಐಆರ್ ಎಸ್ ಅಧಿಕಾರಿಯಾಗಿರುವ ಸುನೀತಾ ತಮ್ಮ ಪತಿಯ ಪರವಾಗಿ ಚುನಾವಣಾ ಪ್ರಚಾರದಲ್ಲಿ ಬಹಳಷ್ಟು ಸಕ್ರಿಯರಾಗಿದ್ದರು. ಕೇಜ್ರಿವಾಲ್ ಕೂಡ ರಾಜಕೀಯಕ್ಕೆ ಧುಮುಕುವ ಮುನ್ನ ಐಆರ್‍ಎಸ್ ಅಧಿಕಾರಿಯಾಗಿದ್ದರು. ಸುನೀತಾ ಅವರು ಆದಾಯ ತೆರಿಗೆ ಅಪೀಲು ಪೀಠ (ಐಟಿಎಟಿ) ಆಯುಕ್ತೆಯಾಗಿ ಸೇವೆ ಸಲ್ಲಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)