varthabharthi


ಅಂತಾರಾಷ್ಟ್ರೀಯ

ಬ್ರಿಟನ್ ನ ನೂತನ ಹಣಕಾಸು ಸಚಿವರಾಗಿ ಇನ್ಫೋಸಿಸ್ ನಾರಾಯಣ ಮೂರ್ತಿ ಅಳಿಯ ರಿಷಿ ಸುನಕ್

ವಾರ್ತಾ ಭಾರತಿ : 13 Feb, 2020

ಲಂಡನ್,ಫೆ.13; ಬ್ರಿಟನ್‌ನ ನೂತನ ಹಣಕಾಸು ಸಚಿವರಾಗಿ ಭಾರತೀಯ ಮೂಲದ ಬ್ರಿಟನ್ ರಾಜಕಾರಣಿ,ರಿಶಿ ಸುನಾಕ್ ಗುರುವಾರ ನೇಮಕಗೊಂಡಿದ್ದಾರೆ.

  ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಅಳಿಯನಾಗಿರುವ ರಿಶಿ ಸುನಾಕ್ ಅವರು, ಯಾರ್ಕ್‌ಶೈರ್ ರಾಜ್ಯದ ರಿಚ್ಮಂಡ್ ಕ್ಷೇತ್ರದ ಸಂಸದರಾಗಿದ್ದಾರೆ.

ಇದಕ್ಕೂ ಮುನ್ನ ಬ್ರಿಟನ್ ವಿತ್ತ ಸಚಿವರಾಗಿದ್ದ ಪಾಕ್ ಮೂಲದ ಸಾಜಿದ್ ಜಾವಿದ್ ಅವರು ಬೊರಿಸ್ ಅವರ ಸಂಪುಟ ಪುನಾರಚನೆಯ ಸಂರ್ಭದಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸುನಾಕ್ ಅವರು ಬೋರಿಸ್ ಸಂಪುಟದಲ್ಲಿರುವ ಎರಡನೆ ಭಾರತೀಯ ಮೂಲದವರಾಗಿದ್ದಾರೆ. ಬ್ರಿಟಿಶ್ ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್ ಬ್ರಿಟನ್ ಸಂಪುಟದಲ್ಲಿ ಇನ್ನೋರ್ವ ಭಾರತೀಯ ಮೂಲದವರಾಗಿದ್ದಾರೆ.

   39 ವರ್ಷರಿಶಿ ಸುನಾಕ್ ಅವರು ಇನ್ಫೋಸಿಸ್ ನಾರಾಯಣ ಮೂರ್ತಿ ಅವರ ಪುತ್ರಿ ಅಕ್ಷತಾ ಅವರನ್ನು ವಿವಾಹವಾಗಿದ್ದುರ. 2015 ಬ್ರಿಟನ್‌ನ ಸಂಸದರಾಗಿ ಅವರು ಮೊದಲ ಬಾರಿಗೆ ಆಯ್ಕೆಯಾಗಿದ್ದರು. ಬ್ರೆಕ್ಸಿಟ್‌ನ ಕಟ್ಟಾ ಬೆಂಬಲಿಗರಾದ ಸುನಾಕ್, ತ್ವರಿತವಾಗಿ ಕನ್ಸರ್ವೇಟಿವ್ ಪಕ್ಷದ ನಾಯಕನಾಗಿ ತ್ವರಿತವಾಗಿ ಬೆಳೆಯುತ್ತಲೇ ಹೋದರು. ಯುರೋಪ್ ಒಕ್ಕೂಟವನ್ನು ತೊರೆಯುವ ಪ್ರಧಾನಿ ಬೊರಿಸ್ ಅವರ ಬ್ರೆಕ್ಸಿಟ್ ಕಾರ್ಯತಂತ್ರದ ಪ್ರಬಲ ಬೆಂಬಲಿಗರಲ್ಲೊಬ್ಬರಾಗಿದ್ದರು.

ಆಕ್ಸ್‌ಫರ್ಡ್ ಹಾಗೂ ಸ್ಟಾನ್‌ಫರ್ಡ್ ವಿವಿ ಪದವೀಧರರಾದ ಸುನಾಕ್ ಅವರ ತಾಯಿ ಫಾರ್ಮಾಸಿಸ್ಟ್ ಆಗಿದ್ದು, ಅವರ ತಂದೆ ರಾಷ್ಟ್ರೀಯ ಆರೋಗ್ಯ ಸೇವೆಯ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)