varthabharthi


ಕರಾವಳಿ

ಮನಪಾ ಆರೋಗ್ಯ ನಿರೀಕ್ಷಕಿಯ ಕೊಲೆಯತ್ನ : ಆರೋಪಿ ಪತಿ ಸೆರೆ

ವಾರ್ತಾ ಭಾರತಿ : 13 Feb, 2020

ಮಂಗಳೂರು, ಫೆ.13: ಮಂಗಳೂರು ಮಹಾನಗರ ಪಾಲಿಕೆಯ ಹಿರಿಯ ಆರೋಗ್ಯ ನಿರೀಕ್ಷಕಿ ನಿರ್ಮಲಾ ಅವರ ಕೊಲೆಗೆ ಯತ್ನಿಸಿದ ಆರೋಪಿ ಪತಿ ಸೂರಜ್‌ನನ್ನು ಬರ್ಕೆ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಅತ್ತಾವರ ಕಾಫ್ರಿಗುಡ್ಡ ನಿವಾಸಿ ಸೂರಜ್ ಫೆ.10ರಂದು ನಗರದ ಜೈಲ್ ರೋಡ್ ಕ್ರಾಸ್ ಬಳಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ತನ್ನ ಪತ್ನಿ ನಿರ್ಮಲಾ ಅವರನ್ನು ಪ್ರಿಯತಮೆ ಪೂರ್ಣಿಮಾಳ ಮಾತಿನಿಂದ ಪ್ರೇರಿತನಾಗಿ ಕೊಲೆಗೆ ಯತ್ನಿಸಿದ್ದ ಎಂದು ದೂರಲಾಗಿದ್ದು, ಪತ್ನಿಯ ದ್ವಿಚಕ್ರ ವಾಹನಕ್ಕೆ ತನ್ನ ಕಾರನ್ನು ಢಿಕ್ಕಿ ಹೊಡೆದು ಕೊಲೆಗೆ ಯತ್ನಿಸಿದ ಹಿನ್ನೆಲೆಯಲ್ಲಿ ನಿರ್ಮಲಾರಿಗೆ ಗಾಯವಾಗಿತ್ತು. ಈ ಸಂದರ್ಭ ಪೂರ್ಣಿಮಾ ಸಾರ್ವಜನಿಕ ಸ್ಥಳದಲ್ಲಿ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿದ್ದಾಳೆ ಎಂದು ಆರೋಪಿಸಲಾಗಿತ್ತು. ಘಟನೆಯ ಬಗ್ಗೆ ನಿರ್ಮಲಾ ನೀಡಿದ ದೂರಿನಂತೆ ಬರ್ಕೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)