varthabharthi


ಕರಾವಳಿ

ಬಜಾಲ್: ಮನೆಗೆ ನುಗ್ಗಿದ ಟಿಪ್ಪರ್; ಅಪಾಯದಿಂದ ಮನೆ ಮಂದಿ ಪಾರು

ವಾರ್ತಾ ಭಾರತಿ : 13 Feb, 2020

ಮಂಗಳೂರು, ಫೆ.13: ನಗರದ ಬಜಾಲ್ ಬಳಿ ಚಾಲಕನ ನಿಯಂತ್ರಣ ತಪ್ಪಿದ ಟಿಪ್ಪರ್ ಲಾರಿಯೊಂದು ಮನೆಗೆ ನುಗ್ಗಿದ ಘಟನೆ ಗುರುವಾರ ರಾತ್ರಿ ನಡೆದಿದೆ. ಈ ಸಂದರ್ಭ ಮನೆಯೊಳಗಿದ್ದವರು ಅಪಾಯದಿಂದ ಪಾರಾಗಿದ್ದಾರೆ.

ದಯಾನಂದ ಎಂಬವರ ಮನೆಗೆ ಟಿಪ್ಪರ್ ನುಗ್ಗಿ ಮಗುಚಿ ಬಿದ್ದಿದೆ. ಇದರಿಂದ ಮನೆಗೆ ಭಾಗಶಃ ಹಾನಿಯಾಗಿದೆ. ಎಕ್ಕೂರಿನಿಂದ ಮಣ್ಣು ಸಾಗಾಟ ಮಾಡಿ ಬಜಾಲ್‌ನ ಗದ್ದೆಗೆ ತುಂಬಿಸಲಾಗುತ್ತಿದೆ. ಈ ಸಂದರ್ಭ ಚಾಲಕನ ನಿಯಂತ್ರಣ ತಪ್ಪಿದ ಟಿಪ್ಪರ್ ಮನೆಗೆ ನುಗ್ಗಿದೆ ಎಂದು ತಿಳಿದುಬಂದಿದೆ.

ಈ ಪರಿಸರದಲ್ಲಿ ದಿನವಿಡೀ ಟಿಪ್ಪರ್‌ಗಳು ಅತೀ ವೇಗ ಹಾಗೂ ನಿರ್ಲಕ್ಷ್ಯದಿಂದ ಚಲಿಸುತ್ತಿದ್ದು, ಇದರಿಂದ ಈ ಭಾಗದ ಜನತೆ ಪ್ರಾಣಭೀತಿ ಎದುರಿಸುವಂತಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)