varthabharthi


ಅಂತಾರಾಷ್ಟ್ರೀಯ

ಸಾವಿನ ಸಂಖ್ಯೆ 1483ಕ್ಕೆ ಏರಿಕೆ

ಕೊರೊನಾ ವೈರಸ್‌ಗೆ ಮತ್ತೆ 116 ಮಂದಿ ಬಲಿ

ವಾರ್ತಾ ಭಾರತಿ : 14 Feb, 2020

ಬೀಜಿಂಗ್: ಕೊರೊನಾ ಸೋಂಕು ಪೀಡಿತ ಚೀನಾದಲ್ಲಿ ಈ ಮಹಾಮಾರಿಯಿಂದ ಮತ್ತೆ 116 ಮಂದಿ ಮೃತಪಟ್ಟಿದ್ದಾರೆ. ಇದರೊಂದಿಗೆ ಈ ಸಾಂಕ್ರಾಮಿಕದಿಂದ ಮೃತಪಟ್ಟವರ ಸಂಖ್ಯೆ 1483ಕ್ಕೆ ಹೆಚ್ಚಿದೆ.

ಆದರೆ ತೀವ್ರ ಆತಂಕದ ಸ್ಥಿತಿ ಇರುವ ಹ್ಯುಬೀ ಪ್ರಾಂತ್ಯದಲ್ಲಿ ಸೋಂಕು ತಗುಲಿದವರ ಸಂಖ್ಯೆ ಕಡಿಮೆಯಾಗಿದೆ. ಪ್ರಾಂತ್ಯದಲ್ಲಿ ಹೊಸದಾಗಿ 116 ಮಂದಿ ಮೃತಪಟ್ಟಿದ್ದು, 4823 ಹೊಸ ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಆರೋಗ್ಯ ಆಯೋಗ ಪ್ರಕಟಿಸಿದೆ.

ಹೊಸದಾಗಿ ಪತ್ತೆಯಾದ ಬಹುತೇಕ ಪ್ರಕರಣಗಳು ಗಂಭೀರ ಸ್ವರೂಪದ್ದಲ್ಲ. ಕೇವಲ ಕ್ಲಿನಿಕಲ್ ಪರೀಕ್ಷೆಯಿಂದ ದೃಢಪಟ್ಟ ಪ್ರಕರಣಗಳು ಎಂದು ಸ್ಪಷ್ಟಪಡಿಸಿದೆ. ಗುರುವಾರ ಈ ಪ್ರಾಂತ್ಯದಲ್ಲಿ 242 ಮಂದಿ ಸಾವನ್ನಪ್ಪಿದ ಬಗ್ಗೆ ವರದಿಯಾಗಿದ್ದು, 14800 ಹೊಸ ಪ್ರಕರಣಗಳು ಬೆಳಕಿಗೆ ಬಂದಿದ್ದವು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)