varthabharthi


ಕರಾವಳಿ

ನಾಪತ್ತೆಯಾಗಿದ್ದ ಮಂಗಳೂರಿನ ಮೂವರು ದಾವಣಗೆರೆಯಲ್ಲಿ ಪತ್ತೆ

ವಾರ್ತಾ ಭಾರತಿ : 14 Feb, 2020

ಮಂಗಳೂರು : ನಾಪತ್ತೆಯಾಗಿದ್ದ ಮಂಗಳೂರಿನ ಮೂವರು ವ್ಯಾಪಾರಿಗಳು ದಾವಣಗೆರೆಯಲ್ಲಿ ಪತ್ತೆಯಾಗಿದ್ದಾರೆ ಎಂದು ಪಾಂಡೇಶ್ವರ ಪೊಲೀಸ್ ಠಾಣೆಯ ಮೂಲಗಳು ತಿಳಿಸಿವೆ.

ಪತ್ತೆಯಾದ ಬಗ್ಗೆ ದೂರುದಾರೆ ಫರಾ ಕೂಡ ಖಚಿತಪಡಿಸಿದ್ದಾರೆ. ವೆಲೆನ್ಸಿಯಾ ನಿವಾಸಿಗಳಾದ ಶುಂಠಿ ವ್ಯಾಪಾರಿ ಸಿರಾಜುದ್ದೀನ್, ಅವರ ಅಣ್ಣ ಸಂಶುದ್ದೀನ್, ಅವರ ಸ್ನೇಹಿತ ಶಾಹ್ ನವಾಝ್ ಫೆ.11ರಂದು ವ್ಯವಹಾರದ ನಿಮಿತ್ತ ಮೈಸೂರಿಗೆ ಹೊರಟಿದ್ದರು. ಬಳಿಕ ಮನೆಯವರ ಸಂಪರ್ಕಕ್ಕೆ ‌ಸಿಗದ ಕಾರಣ ಫರಾ ಪಾಂಡೇಶ್ವರ ಠಾಣೆಗೆ ದೂರು ನೀಡಿದ್ದರು.

ಫೆ.11ರಂದು ಇವರು ವ್ಯವಹಾರ ನಿಮಿತ್ತ ಮೈಸೂರಿಗೆ ಹೋಗಿ ಬರುವೆವು ಎಂದು ಕಾರಿನಲ್ಲಿ ತೆರಳಿದ್ದರು. ಅಂದು ಸಂಜೆ 4:30ಕ್ಕೆ ಸಿರಾಜುದ್ದೀನ್ ತನ್ನ ಪತ್ನಿಗೆ ಕರೆ ಮಾಡಿ ಮೈಸೂರು ತಲುಪಲು 1 ಗಂಟೆ ಬೇಕಾಗುತ್ತದೆ ಎಂದು ತಿಳಿಸಿದ್ದರು. ರಾತ್ರಿ ಸುಮಾರು 8:30ಕ್ಕೆ ಪತ್ನಿ ಫರಾ ತನ್ನ ಪತಿ ಸಿರಾಜುದ್ದೀನ್‌ನ ಮೊಬೈಲ್‌ಗೆ ಕರೆ ಮಾಡಿದಾಗ ರಿಂಗ್ ಆಗಿದೆ. ಬಳಿಕ ಕರೆ ಮಾಡಿದಾಗ ಮೊಬೈಲ್ ಸ್ವಿಚ್ಡ್ ಆಫ್ ಆಗಿದೆ. ಬಳಿಕ ಮೂವರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಅವರನ್ನು ಪತ್ತೆಹಚ್ಚಿಕೊಡಬೇಕು ಎಂದು ಪಾಂಡೇಶ್ವರ ಠಾಣೆಗೆ ದೂರು ನೀಡಲಾಗಿತ್ತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)