varthabharthi

ಗಲ್ಫ್ ಸುದ್ದಿ

ಅಲ್ ಹಸ್ಸದಲ್ಲಿ ಕೆಸಿಎಫ್ ಫೌಂಡೇಶನ್ ಡೇ

ವಾರ್ತಾ ಭಾರತಿ : 15 Feb, 2020

ದಮ್ಮಾಮ್, ಫೆ.15: ಕೆಸಿಎಫ್(ಕರ್ನಾಟಕ ಕಲ್ಚರಲ್ ಫೌಂಡೇಶನ್) ಅಲ್ ಹಸ್ಸ ಸೆಕ್ಟರ್‌ ವತಿಯಿಂದ ಕೆಸಿಎಫ್ ಅಲ್ ಹಸ್ಸ ಸೆಕ್ಟರ್ ಅಧ್ಯಕ್ಷ ಹಬೀಬ್ ಉಸ್ತಾದ್ ಅಧ್ಯಕ್ಷತೆಯಲ್ಲಿ ಹಫೂಫ್ ಸ‌ಅದಿಯಾ ಹಾಲ್ ನಲ್ಲಿ 'ಕೆಸಿಎಫ್ ಫೌಂಡೇಶನ್ ದಿನ' ಆಚರಿಸಲಾಯಿತು.

ಮುಖ್ಯ ಭಾಷಣ ಮಾಡಿದ  ಕೆಸಿಎಫ್ ದಾಯಿ ಉಮರ್ ಫಾರೂಖ್ ಬ‌ಅಹ್ಸನಿ, ಕೆಸಿಎಫ್ ಕಾರ್ಯಚಟುವಟಿಕೆಗಳ ಬಗ್ಗೆ ವಿವರಿಸಿದರು.

ಇಬ್ರಾಹೀಂ ಸ‌ಅದಿ, ಅಹ್ಮದ್ ಸ‌ಅದಿ, ನೌಶಾದ್ ಅಮಾನಿ ಮತ್ತು ಇಕ್ಬಾಲ್ ಜಿ.ಕೆ.ಗುಲ್ವಾಡಿ ಮಾತನಾಡಿದರು.

ವೇದಿಕೆಯಲ್ಲಿ ಕೆಸಿಎಫ್ ಅಲ್ ಹಸ್ಸ ಸೆಕ್ಟರ್ ಅಧ್ಯಕ್ಷ ಹಬೀಬ್ ಉಸ್ತಾದ್ ಮರ್ದಲಾ, ಸಮಿ ಎಂಬಸ್ಸಿ ಮಾಲಕ, ಹಾಜಿ ಅಬ್ದುರ್ರಹ್ಮಾನ್ ಉಚ್ಚಿಲ, ಅಹ್ಮದ್ ಸ‌ಅದಿ, ನೌಶಾದ್ ಅಮಾನಿ, ಇಬ್ರಾಹೀಂ ಸ‌ಅದಿ ಮಚ್ವಂಪಾಡಿ, ಶಂಸುದ್ದೀನ್ ಕೊಡಗು, ಹಫೂಫ್ ಯನಿಟ್ ಅಧ್ಯಕ್ಷ ಅಬೂಬಕರ್ ಕಿಲ್ಲೂರು, ಮುಬರಾಝ್ ಯುನಿಟ್ ಅಧ್ಯಕ್ಷ ಅಬ್ದುಲ್ಲಾ ಪುಲಾಬೆ ಉಪಸ್ಥಿತರಿದ್ದರು.

ಸಮದ್ ಬೇಂಗಿಲ ಕಿರಾಅತ್ ಪಠಿಸಿದರು. ಇಸ್ಹಾಕ್ ಸಿ.ಐ.ಫಜೀರ್ ಸ್ವಾಗತಿಸಿದರು. ಪ್ರ.ಕಾರ್ಯದರ್ಶಿ ಹಾರಿಸ್ ಕಾಜೂರು ವಂದಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)