varthabharthi

ಸಿನಿಮಾ

ಕೆಜಿಎಫ್ ಚಾಪ್ಟರ್-2ನಲ್ಲಿ ರವೀನಾ ಟಂಡನ್

ವಾರ್ತಾ ಭಾರತಿ : 16 Feb, 2020

ಬಾಲಿವುಡ್ ನಟಿ ರವೀನಾ ಟಂಡನ್ ಮೊದಲ ಬಾರಿಗೆ ಕನ್ನಡ ಚಿತ್ರ ‘ಉಪೇಂದ್ರ’ದಲ್ಲಿ ನಟಿಸಿದ್ದರು. ಈಗ 20 ವರ್ಷಗಳ ಬಳಿಕ ಅವರು ‘ಕೆಜಿಎಫ್ ಚಾಪ್ಟರ್-2’ನಲ್ಲಿ ಮತ್ತೆ ನಟಿಸುತ್ತಿದ್ದಾರೆ. 1999ರಲ್ಲಿ ಬಿಡುಗಡೆಯಾದ ಬ್ಲಾಕ್ ಬಸ್ಟರ್ ಚಿತ್ರ ‘ಉಪೇಂದ್ರ’ದ ‘ಮಸ್ತ್ ಮಸ್ತ್ ಹುಡುಗಿ ಬಂದ್ಲು ನೋಡು’ ಹಾಡನ್ನು ಅವರು ಈಗಲೂ ನೆನಪಿಸಿಕೊಳ್ಳುತ್ತಾರೆ. ‘‘ಉಪೇಂದ್ರ ಚಿತ್ರ ಶೂಟ್ ಮಾಡಿರುವುದು, ನಾನು ನಿರ್ವಹಿಸಿದ ಪಾತ್ರ, ಶೂಟಿಂಗ್ ನಡೆದ ಸ್ಥಳಗಳು ಎಲ್ಲವೂ ನನಗೆ ನೆನಪಿದೆ. ಈ ಬಗ್ಗೆ ನಾನು ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಅವರೊಂದಿಗೆ ಚರ್ಚಿಸಿದ್ದೇನೆ. ಅದು ಎಂತಹ ಅದ್ಭುತ ಚಿತ್ರ. ಉಪೇಂದ್ರ ಅವರಂತಹ ಅಸಾಧಾರಣ ಪ್ರತಿಭೆಯೊಂದಿಗೆ ಕೆಲಸ ಮಾಡುವುದು ಖುಷಿಯ ವಿಚಾರ. ಉಪೇಂದ್ರ ಚಿತ್ರದ ಚಿತ್ರೀಕರಣ ತಮಾಷೆಯಾಗಿತ್ತು’’ ಎಂದು ಅವರಿಗೆ ತಿಳಿಸಿದೆ ಎಂದು ಮೈಸೂರಿನಲ್ಲಿ ‘ಕೆಜಿಎಫ್ 2’ ಚಿತ್ರೀಕರಣದಲ್ಲಿ ಪಾಲ್ಗೊಂಡಿರುವ ರವೀನಾ ಟಂಡನ್ ತಿಳಿಸಿದ್ದಾರೆ. ಬ್ಲಾಕ್ ಬಸ್ಟರ್ ಚಿತ್ರವಾದ ಕೆಜಿಎಫ್ ಚಾಪ್ಟರ್-2ರ ಸೀಕ್ವೆಲ್‌ನಲ್ಲಿ ಸಂಜಯ್ ದತ್ ಹಾಗೂ ರವೀನಾ ಟಂಡನ್ ನಟಿಸುತ್ತಿದ್ದಾರೆ. ‘‘ನಾನು ಕೆಜಿಎಫ್ ಚಾಪ್ಟರ್ 1ರ ಸ್ಕ್ರಿಪ್ಟ್‌ನ್ನು ಈಗಾಗಲೇ ಆಲಿಸಿದ್ದೇನೆ. ಅದು ಅದ್ಭುತವಾಗಿತ್ತು. ಚಿತ್ರ ಕೂಡ ಅಷ್ಟೇ ಅದ್ಭುತವಾಗಿ ಮೂಡಿ ಬಂದಿತ್ತು. ಆದುದರಿಂದ ಸಂಜು ಹಾಗೂ ನಾನು ಕೆಜಿಎಫ್ ಚಾಪ್ಟರ್-2ನ್ನು ಎದುರು ನೋಡುತ್ತಿದ್ದೇವೆ’’ ಎಂದು ರವೀನಾ ಟಂಡನ್ ಹೇಳಿದ್ದಾರೆ. ‘‘ಕೆಜಿಎಫ್ ಪಾನ್ ಇಂಡಿಯಾ ಸಿನೆಮಾ ಎಂದು ಬ್ರಾಂಡ್ ಆಗಿದೆ. ಇದು ಅದ್ಭುತವಾಗಿ ಚಿತ್ರೀಕರಿಸಲಾದ ಹೊಸ ಯುಗದ ಸಿನೆಮಾ. ಯಶ್ ಅವರ ನಟನೆ ಅತ್ಯುತ್ತಮ. ಕೆಜಿಎಫ್ ಚಾಪ್ಟರ್ 1 ನೋಡಿದಾಗ ನನಗೆ ತುಂಬಾ ಖುಷಿಯಾಯಿತು’’ ಎಂದು ರವೀನಾ ಟಂಡನ್ ಹೇಳಿದ್ದಾರೆ.

‘‘ನಾನು ಇದಕ್ಕೆ ನಿರ್ದೇಶಕ ಪ್ರಶಾಂತ್ ನೀಲ್ ಅವರನ್ನು ಶ್ಲಾಘಿಸುತ್ತೇನೆ. ಉಪೇಂದ್ರ ಬಳಿಕ ಅವರು ನನಗೆ ಅತ್ಯುತ್ತಮ ಅವಕಾಶ ನೀಡಿದ್ದಾರೆ. ನಾನು ಹಿಂದಿ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದೇನೆ ಎಂದು ಜನರು ಭಾವಿಸಿದ್ದಾರೆ. ಆದರೆ, ನಾನು ದಕ್ಷಿಣ ಭಾರತದ ಚಿತ್ರಗಳಲ್ಲಿ ನಟಿಸುವುದನ್ನು ಕೂಡ ಪರಿಗಣಿಸುತ್ತೇನೆ’’ ಎಂದು ರವೀನಾ ಟಂಡನ್ ಹೇಳಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)