varthabharthi


ಸಿನಿಮಾ

‘ಕಭಿ ಈದ್ ಕಭಿ ದಿವಾಲಿ’ಯಲ್ಲಿಸಲ್ಮಾನ್ಗೆ ಪೂಜಾ ಹೆಗ್ಡೆ ನಾಯಕಿ

ವಾರ್ತಾ ಭಾರತಿ : 16 Feb, 2020

ಕೊನೆಯ ಬಾರಿ ‘ಹೌಸ್‌ಫುಲ್’ ಚಿತ್ರದಲ್ಲಿ ಕಾಣಿಸಿಕೊಂಡ ಪೂಜಾ ಹೆಗ್ಡೆ ಹೊಸ ಚಿತ್ರವೊಂದರಲ್ಲಿ ಸಲ್ಮಾನ್ ಖಾನ್ ಜೊತೆಯಾಗಿ ನಟಿಸಲಿದ್ದಾರೆ. ಚಿತ್ರದ ಹೆಸರು ‘ಕಭಿ ಈದ್ ಕಭಿ ದಿವಾಲಿ’. ಇದು ಅವರು ಸಲ್ಮಾನ್ ಖಾನ್ ಅವರೊಂದಿಗೆ ನಟಿಸುತ್ತಿರುವ ಮೊದಲ ಚಿತ್ರ. ಈ ಬಗ್ಗೆ ಪ್ರತಿಕ್ರಿಯಿಸಿರುವ ನಿರ್ಮಾಪಕ ಸಾಜಿದ್ ನಾಡಿಯಾಡ್‌ವಾಲಾ, ಈ ಚಿತ್ರದ ಪ್ರಮುಖ ಪಾತ್ರಕ್ಕೆ ಪೂಜಾ ಹೆಗ್ಡೆ ಅತ್ಯುತ್ತಮ ಆಯ್ಕೆ ಎಂದು ಹೇಳಿದ್ದಾರೆ. ‘ಹೌಸ್‌ಫುಲ್ 4’ ಚಿತ್ರದಲ್ಲಿ ಪೂಜಾ ಹೆಗ್ಡೆ ನಮ್ಮೆಂದಿಗೆ ಕೆಲಸ ಮಾಡಿದ್ದರು. ‘ಕಭಿ ಈದ್ ಕಭಿ ದಿವಾಳಿ’ ಚಿತ್ರದ ಪಾತ್ರಕ್ಕೆ ಅವರು ಸರಿ ಹೊಂದುತ್ತಾರೆ. ಅಲ್ಲದೆ, ಅವರು ಸಲ್ಮಾನ್ ಖಾನ್ ಅವರಿಗೆ ಉತ್ತಮ ಜೋಡಿ. ಅವರು ಚಿತ್ರದ ಕಥೆಗೆ ಹೊಸತನ ತರಲಿದ್ದಾರೆ ಎಂದು ನಿರ್ದೇಶಕರು ತಿಳಿಸಿದ್ದಾರೆ. ಪರ್ಹಾದ್ ಸಾಮ್ಜಿ ನಿರ್ದೇಶನದ ‘ಕಭಿ ಈದ್ ಕಭಿ ದೀವಾಲಿ’ ಚಿತ್ರವನ್ನು ಸಲ್ಮಾನ್ ಖಾನ್ ತನ್ನ ಅಭಿಮಾನಿಗಳಿಗೆ 2021ರ ಈದ್‌ಗೆ ಕೊಡುಗೆಯಾಗಿ ನೀಡಲಿದ್ದಾರೆ. ಪ್ರಸ್ತುತ ಸಲ್ಮಾನ್ ಖಾನ್ ಅವರು 2020ರ ಈದ್‌ಗೆ ಬಿಡುಗಡೆಯಾಗಲಿರುವ ‘ರಾಧೇ: ಯುವರ್ ಮೋಸ್ಟ್ ವಾಂಟೆಡ್ ಬಾಯ್’ ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರವನ್ನು ಪ್ರಭುದೇವ್ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದಲ್ಲಿ ದಿಶಾ ಪಟಾನಿ ಹಾಗೂ ರಣದೀಪ್ ಹೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದು 2009ರ ‘ವಾಂಟೆಡ್’ ಚಿತ್ರದ ಸೀಕ್ವೆಲ್.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)