varthabharthi

ಗಲ್ಫ್ ಸುದ್ದಿ

ಬಹರೈನ್: ಐಒಸಿ ಸದಸ್ಯರನ್ನು ಭೇಟಿಯಾದ ಕೇಂದ್ರ ಮಾಜಿ ಸಚಿವ ರಾಜೀವ್ ಶುಕ್ಲಾ

ವಾರ್ತಾ ಭಾರತಿ : 17 Feb, 2020

ಬಹರೈನ್, ಫೆ.17: ಮಾಜಿ ಕೇಂದ್ರ ಸಚಿವ, ಹಿರಿಯ ಕಾಂಗ್ರೆಸ್ ಮುಖಂಡ, ಹೆಸರಾಂತ ಪತ್ರಕರ್ತರೂ ಆಗಿರುವ ರಾಜೀವ್ ಶುಕ್ಲಾ ಅವರು ಭಾರತೀಯ ಸಾಗರೋತ್ತರ ಕಾಂಗ್ರೆಸ್(ಐಒಸಿ)ನ ಬಹರೈನ್ ಚಾಪ್ಟರ್ ಸದಸ್ಯರನ್ನು ಇತ್ತೀಚೆಗೆ ಭೇಟಿಯಾದರು.

ಈ ಸಂದರ್ಭ ಅವರು ಐಒಸಿ ಬಹರೈನ್ ಚಾಪ್ಟರ್ ಸದಸ್ಯರನ್ನು ಹಾಗೂ ಬಹರೈನ್‌ನ ಇತರ ರಾಜ್ಯಗಳ ಕಾಂಗ್ರೆಸ್ ಸಂಘಟನೆಗಳ ಮುಖಂಡರನ್ನುದ್ದೇಶಿಸಿ ಮಾತನಾಡಿದರು. 

ಐಒಸಿ ಬಹರೈನ್ ಅಧ್ಯಕ್ಷ ಮುಹಮ್ಮದ್ ಮನ್ಸೂರ್ ಅವರ ಕಾರ್ಯವೈಖರಿ ಬಗ್ಗೆ ಶುಕ್ಲಾ ಮೆಚ್ಚುಗೆ ವ್ಯಕ್ತಪಡಿಸಿದರು. ಸದಾ ಪಕ್ಷವನ್ನು ಕಟ್ಟುವಲ್ಲಿಈ ಸ್ಫೂರ್ತಿದಾಯಕ ಮನೋಭಾವವನ್ನು ಕಾಯ್ದುಕೊಳ್ಳುವಂತೆ ಅವರು ಸದಸ್ಯರಿಗೆ ಕರೆ ನೀಡಿದರು.

ಈ ಸಂದರ್ಭ ಮನ್ಸೂರ್ ಅವರು ಶುಕ್ಲಾರನ್ನು ಹೂಗುಚ್ಛ ನೀಡಿ ಗೌರವಿಸಿದರು.

ಐಒಸಿ ಪ್ರಧಾನ ಕಾರ್ಯದರ್ಶಿಗಳಾದ ಖುರ್ಷಿದ್ ಆಲಂ, ಬಶೀರ್ ಅಂಬಲಾಯಿ, ಆಸ್ಟಿನ್ ಸಂತೋಷ್, ಉಪಾಧ್ಯಕ್ಷ ಸೊವಿಚನ್ ಚೆನ್ನತುಸ್ಸೇರಿ, ಒಐಸಿಸಿ ಯುವ ಘಟಕದ ಅಧ್ಯಕ್ಷ ಇಬ್ರಾಹೀಂ ಆದ್ದಂ, ಐವೈಸಿಸಿ ಅಧ್ಯಕ್ಷ ಅನಸ್ ರಹೀಂ, ತಂಬನ್, ಅನಿಲ್ ಯು.ಕೆ., ಶಬೀರ್ ಮುಕ್ಕನ್, ನಿತೀಶ್ಚಂದ್ರನ್, ಫಾಝಿಲ್ ವಟ್ಟೋಳಿ ಉಪಸ್ಥಿತರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)