varthabharthi

ಗಲ್ಫ್ ಸುದ್ದಿ

ತಾನೇ ಸ್ಥಾಪಿಸಿದ 'ಎನ್‌ಎಮ್‌ ಸಿ ಹೆಲ್ತ್’ಗೆ ಬಿ.ಆರ್. ಶೆಟ್ಟಿ ರಾಜೀನಾಮೆ

ವಾರ್ತಾ ಭಾರತಿ : 17 Feb, 2020

ದುಬೈ: ಅನಿವಾಸಿ ಉದ್ಯಮಿ ಬಿ. ಆರ್. ಶೆಟ್ಟಿ ಯುಎಇಯಲ್ಲಿ ತಾನೇ ಸ್ಥಾಪಿಸಿರುವ ‘ಎನ್‌ಎಮ್‌ ಸಿ ಹೆಲ್ತ್’ ಸಂಸ್ಥೆಯ ಬೋರ್ಡ್ ಗೆ ರಾಜೀನಾಮೆ ನೀಡಿದ್ದಾರೆ.

ತಕ್ಷಣದಿಂದಲೇ ಜಾರಿಗೆ ಬರುವಂತೆ ಬಿ.ಆರ್.ಶೆಟ್ಟಿಯವರು ಹನಿ ಬುತ್ತಿಖಿ ಮತ್ತು ಬೋರ್ಡ್ ಸದಸ್ಯ ಅಬ್ದುರ್ರಹ್ಮಾನ್ ಬಸದ್ದಿಕ್ ಅವರ ಜೊತೆಗೆ ರಾಜೀನಾಮೆ ನೀಡಿದ್ದಾರೆ.

ಸಂಸ್ಥೆಯಲ್ಲಿರುವ ತನ್ನ ಶೇರುಗಳ ಗಾತ್ರದ ಬಗ್ಗೆ ಅವರು ತಪ್ಪು ಮಾಹಿತಿ ನೀಡಿದರೆನ್ನಲಾದ ಕಾರಣಕ್ಕೆ ‘ಎನ್‌ಎಮ್‌ಸಿ ಹೆಲ್ತ್’ ಸಂಸ್ಥೆಯ ಬೋರ್ಡ್ ಡಿಸ್ಕಶನ್ಸ್‌ನ ಅಧ್ಯಕ್ಷತೆಯಿಂದ ಬಿ.ಆರ್. ಶೆಟ್ಟಿ ವಜಾಗೊಳ್ಳಲಿದ್ದಾರೆ ಎಂದು ಈ ಹಿಂದೆ ವರದಿಯಾಗಿತ್ತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)