varthabharthi

ಕರಾವಳಿ

ಮಂಗಳೂರು: 'ಅಬ್ಬ’ ಚಲನಚಿತ್ರ ತೆರೆಗೆ

ವಾರ್ತಾ ಭಾರತಿ : 21 Feb, 2020

ಮಂಗಳೂರು, ಫೆ.21: ಕ್ಯಾಪ್‌ಮೆನ್ ಮೀಡಿಯಾ ಮೇಕರ್ಸ್‌ ಲಾಂಛನದಡಿ ನಿರ್ಮಾಣಗೊಂಡಿರುವ ಎಂಜಿ ರಹೀಂ ರಚಿಸಿ, ನಿರ್ದೇಶಿಸಿರುವ ‘ಅಬ್ಬ’ ಚಲನಚಿತ್ರವು ಶುಕ್ರವಾರ ನಗರದ ಫಿಝಾ ಮಾಲ್‌ನ ‘ಪಿವಿಆರ್’ನಲ್ಲಿ ಪ್ರದರ್ಶನಗೊಂಡಿತು.

ವರ್ಷದ ಹಿಂದೆಯೇ ನಿರ್ಮಾಣಗೊಂಡಿದ್ದ ಈ ಚಿತ್ರವು ತಾಂತ್ರಿಕ ತೊಂದರೆಯಿಂದಾಗಿ ಪ್ರದರ್ಶನ ಕಂಡಿರಲಿಲ್ಲ. ಇದೀಗ ಎಲ್ಲಾ ಅಡೆತಡೆಗಳನ್ನೂ ನಿವಾರಿಸಿ ಬಿಡುಗಡೆಗೊಂಡಿದ್ದು, ಬ್ಯಾರಿ ಆಂದೋಲನದಲ್ಲಿ ತೊಡಗಿಸಿಕೊಂಡವರ ಸಹಿತ ಬ್ಯಾರಿ ಭಾಷಿಗರು ಚಿತ್ರ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಕಳೆದ ವರ್ಷ ಬೆಂಗಳೂರಿನಲ್ಲಿ ನಡೆದ ಅಂತರ್‌ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ‘ಅಬ್ಬ’ ಪ್ರದರ್ಶನ ಕಂಡು ಗಮನ ಸೆಳೆದಿತ್ತು. ಮುಹಮ್ಮದ್ ಬಡ್ಡೂರ್, ರೂಪಾ ವರ್ಕಾಡಿ, ರಹೀಂ ಸಚ್ಚೇರಿಪೇಟೆ, ಶುಭಾಂಗಿ, ಸತ್ತಾರ್ ಗೂಡಿನಬಳಿ, ಎಂ.ಕೆ.ಮಠ,ಬಿ.ಎ.ಮುಹಮ್ಮದ್ ಅಲಿ, ಉಮರ್ ಯು.ಎಚ್., ಹುಸೈನ್ ಕಾಟಿಪಳ್ಳ, ಬಶೀರ್ ಬೈಕಂಪಾಡಿ ಮತ್ತಿತರರು ನಟಿಸಿರುವ ಈ ಚಿತ್ರಕ್ಕೆ ಎಲ್ಪಿನ್ ಕೃಷ್ಣ ಮತ್ತು ಮುಹಮ್ಮದ್ ಬಡ್ಡೂರು ಹಾಡುಗಳನ್ನು ರಚಿಸಿದ್ದಾರೆ. ರಿಯಾಝ್ ಪಯ್ಯೋಳಿ ಹಾಡಿಗಳಿಗೆ ಮತ್ತು ಇಸ್ಮಾಯೀಲ್ ತಳಂಗರೆ, ಸುಹೈಲ್ ಬಡ್ಡೂರು, ರಿಜಿಲಾ ರಿಯಾಝ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

ಹಿಂದೂ -ಮುಸ್ಲಿಂ ಸೌಹಾರ್ದಕ್ಕೆ ಒತ್ತು ನೀಡಲಾದ 2 ತಾಸಿನ ಈ ಚಿತ್ರದಲ್ಲಿ ಅಪ್ಪಟ ಬ್ಯಾರಿ ಸಂಸ್ಕೃತಿಗೆ ಆದ್ಯತೆ ನೀಡಲಾಗಿದೆ. ಸುಂದರವಾದ ಮೂರು ಹಾಡುಗಳು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)