varthabharthi

ಕರಾವಳಿ

ಕಲ್ಲಾಪು: ರಿಕ್ಷಾ ಚಾಲಕರಿಗೆ ಹಲ್ಲೆ

ವಾರ್ತಾ ಭಾರತಿ : 21 Feb, 2020

ಮಂಗಳೂರು, ಫೆ.21: ಪ್ರಕರಣವೊಂದಕ್ಕೆ ಸಂಬಂಧಿಸಿ ಕಲ್ಲಾಪು ಬಳಿ ಇಬ್ಬರು ರಿಕ್ಷಾ ಚಾಲಕರಿಗೆ ಹಲ್ಲೆಗೈದ ಘಟನೆ ಶುಕ್ರವಾರ  ನಡದಿದೆ. ಹಲ್ಲೆಗೊಳಗಾದವರನ್ನು ಕಲ್ಲಾಪು ನಿವಾಸಿ ಝುಬೈರ್ ಮತ್ತು ಲತೀಫ್ ಎಂದು ಗುರುತಿಸಲಾಗಿದೆ 

ಕಲ್ಲಾಪುವಿನಲ್ಲಿ‌ ನಿರ್ಮಾಣವಾಗಿರುವ ನೂತನ ಕಟ್ಟಡದ ಮುಂಭಾಗದಲ್ಲಿ ಹಲವು ವರ್ಷಗಳಿಂದ ಕಾರ್ಯಾಚರಿಸುತ್ತಿದ್ದ ರಿಕ್ಷಾ ಪಾರ್ಕ್ ತೆರವುಗೊಳಿಸಲು ಕಟ್ಟಡ ಮಾಲಕರು ಸೂಚಿಸಿದ್ದರು ಎನ್ನಲಾಗಿದೆ. ಇದಕ್ಕೆ ರಿಕ್ಷಾ ಚಾಲಕರು ನಿರಾಕರಿಸಿದ ಕಾರಣ ಇತ್ತಂಡಗಳ ಮಧ್ಯೆ ಗುರುವಾರ ಮಾತಿನ ಚಕಮಕಿ ನಡೆದು ಠಾಣೆಯಲ್ಲಿ ದೂರು, ಪ್ರತಿದೂರು ದಾಖಲಾಗಿತ್ತು.

ಇದೇ ವಿಚಾರಕ್ಕೆ ಸಂಬಂಧಿಸಿ ಉಸ್ಮಾನ್ ಕಲ್ಲಾಪು, ಝೆನೂನ್, ಅಬ್ದುಲ್ ಬುಖಾರಿ, ಹುಸೈನ್ ಕಲ್ಲಾಪು, ಮಯ್ಯದ್ದಿ ಕಲ್ಲಾಪು ಎಂಬವರ ತಂಡ ರಿಕ್ಷಾ ಚಾಲಕರ ಮೇಲೆ ಹಲ್ಲೆ ನಡೆಸಿದೆ ಎನ್ನಲಾಗಿದೆ. ಶುಕ್ರವಾರ ಮಧ್ಯಾಹ್ನ ಮಸೀದಿಗೆ ತೆರಳಿ ವಾಪಸ್ ಬರುತ್ತಿದ್ದ ಸಂದರ್ಭ ತಂಡ ಈ ಕೃತ್ಯ ಎಸಗಿದೆ ಎಂದು ಹಲ್ಲೆಗೊಳಗಾದ ಝುಬೈರ್ ಉಳ್ಳಾಲ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)