ಬಿಷಪ್ ಫ್ರಾಂಕೊ ಮುಳಕ್ಕಲ್ ವಿರುದ್ಧ ಇನ್ನೋರ್ವ ಕ್ರೈಸ್ತ ಸನ್ಯಾಸಿನಿಯಿಂದ ಲೈಂಗಿಕ ಕಿರುಕುಳದ ಆರೋಪ
ತಿರುವನಂತಪುರ, ಫೆ. 21: ಬಿಷಪ್ ಫ್ರಾಂಕೊ ಮುಳಕ್ಕಲ್ ವಿರುದ್ಧ ಇನ್ನೋರ್ವ ಕ್ರೈಸ್ತ ಸನ್ಯಾಸಿನಿ ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ದಾರೆ. ಇವರು ಬಿಷಪ್ ವಿರುದ್ಧ ಲೈಂಗಿಕ ಕಿರುಕುಳದ ಬಗ್ಗೆ ಹೇಳಿಕೆ ನೀಡುತ್ತಿರುವ ಎರಡನೇ ಮಹಿಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಮುಳಕ್ಕಲ್ ವಿರುದ್ಧ ದಾಖಲಿಸಲಾದ ಅತ್ಯಾಚಾರ ಪ್ರಕರಣದಲ್ಲಿ 14ನೇ ಸಾಕ್ಷಿಯಾಗಿರುವ ಕ್ರೈಸ್ತ ಸನ್ಯಾಸಿನಿ ತನ್ನ ಹೇಳಿಕೆಯಲ್ಲಿ, “ಬಿಷಪ್ ಅವರು ನನ್ನೊಂದಿಗೆ ಫೋನ್ನಲ್ಲಿ ಅಶ್ಲೀಲವಾಗಿ ಮಾತನಾಡುತ್ತಿದ್ದರು” ಎಂದಿದ್ದಾರೆ. ನಾವಿಬ್ಬರು 2015ರಿಂದ 2017ರ ವರೆಗೆ ಫೋನ್ ಕರೆ, ಚಾಟ್ ಹಾಗೂ ವೀಡಿಯೊ ಕರೆ ಮೂಲಕ ಸಂಪರ್ಕದಲ್ಲಿದ್ದೆವು. ಬಿಷಪ್ಗೆ ಹೆದರಿ ನಾನು ಸಂಪರ್ಕ ಮುಂದುವರಿಸಿದ್ದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
“2018 ಸೆಪ್ಟಂಬರ್ನಲ್ಲಿ ನೀಡಿದ ಹೇಳಿಕೆಯಲ್ಲಿ ಕ್ರೈಸ್ತ ಸನ್ಯಾಸಿನಿ, 2017ರಲ್ಲಿ ಬಿಷಪ್ ಅವರು ಕಾನ್ವೆಂಟ್ಗೆ ಭೇಟಿ ನೀಡಿದ್ದರು. ಆಗ ಅವರು ನನ್ನನ್ನು ಅಪ್ಪಿಕೊಂಡು ಮುತ್ತು ಕೊಟ್ಟಿದ್ದರು” ಎಂದು ಹೇಳಿದ್ದಾರೆ.
ಕ್ರೈಸ್ತ ಸನ್ಯಾಸಿನಿ ಬಿಷಪ್ ವಿರುದ್ಧ ಯಾವುದೇ ಪ್ರಕರಣ ದಾಖಲಿಸಲು ಸಿದ್ಧರಾಗಿಲ್ಲ. ಅವರು ತಮ್ಮ ವ್ಯಾಪ್ತಿಯ ಪೊಲೀಸರನ್ನು ಎಚ್ಚರಗೊಳಿಸಿದರು. ಆದರೆ ಪೊಲೀಸರ ತಂಡ ಅವರನ್ನು ಭೇಟಿಯಾದಾಗ ದೂರು ನೀಡಲು ನಿರಾಕರಿಸಿದರು. ಆದುದರಿಂದ ಬಿಷಪ್ ವಿರುದ್ಧ ಪ್ರತ್ಯೇಕ ದೂರು ದಾಖಲಿಸಲು ಸಾಧ್ಯವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.