varthabharthi

ರಾಷ್ಟ್ರೀಯ

ಡೊನಾಲ್ಡ್ ಟ್ರಂಪ್, ಮೆಲಾನಿಯಾ ಜೊತೆಗೆ ಪುತ್ರಿ ಇವಾಂಕ, ಜರೇಡ್ ಕುಶ್ನರ್ ಭಾರತಕ್ಕೆ

ವಾರ್ತಾ ಭಾರತಿ : 22 Feb, 2020

ಹೊಸದಿಲ್ಲಿ, ಫೆ. 21: ಭಾರತಕ್ಕೆ ಎರಡು ದಿನಗಳ ಭೇಟಿಗಾಗಿ ಪೆಬ್ರವರಿ 24ರಂದು ಆಗಮಿಸಲಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಪತ್ನಿ ಮೆಲಾನಿಯಾ ಟ್ರಂಪ್ ಜೊತೆಗೆ ಪುತ್ರಿ ಇವಾಂಕ ಟ್ರಂಪ್ ಹಾಗೂ ಜರೇಡ್ ಕುಶ್ನರ್ ಆಗಮಿಸಲಿದ್ದಾರೆ.

 ಇವಾಂಕ ಹಾಗೂ ಜರೇಡ್ ಡೊನಾಲ್ಡ್ ಟ್ರಂಪ್ ಅವರ ಸಲಹೆಗಾರರು. ನಾಲ್ವರು ಅಹ್ಮದಾಬಾದ್‌ಗೆ ಆಗಮಿಸಿ, ಅನಂತರ ತಾಜ್‌ಮಹಲ್ ವೀಕ್ಷಿಸಲು ಆಗ್ರಕ್ಕೆ ತೆರಳಲಿದ್ದಾರೆ. ಇವಾಂಕ ಈ ಹಿಂದೆ 2017 ನವೆಂಬರ್‌ನಲ್ಲಿ ಹೈದರಾಬಾದ್‌ಗೆ ಭೇಟಿ ನೀಡಿದ್ದರು. ಈ ಅಮೆರಿಕ ನಿಯೋಗದಲ್ಲಿ ವಾಣಿಜ್ಯ ಕಾರ್ಯದರ್ಶಿ ವಿಲ್ಬರ್ ರೋಸ್, ಇಂಧನ ಕಾರ್ಯದರ್ಶಿ ಡ್ಯಾನ್ ಬ್ರೋಯಿಲೆಟ್ಟೆ, ಎನ್‌ಎಸ್‌ಎ ರೋಬರ್ಟ್ ಸಿ. ಓಬ್ರಿಯಾನ್ ಹಾಗೂ ವೈಟ್ ಹೌಸ್ ಸಿಬ್ಬಂದಿ ಮುಖ್ಯಸ್ಥ ಮಿಕ್ಕಿ ಮುಲ್ವಾನೆ ಮೊದಲಾದವರು ಇದ್ದಾರೆ. ಡೊನಾಲ್ಡ್ ಟ್ರಂಪ್ ಅವರ ಪೂರ್ಣ ಕುಟುಂಬ ಭಾರತಕ್ಕೆ ಆಗಮಿಸಲಿದೆ. ಮುಖ್ಯವಾಗಿ ಮೆಲಾನಿಯಾ ಹಾಗೂ ಇವಾಂಕ ಒಟ್ಟಾಗಿ ಸಾಗರೋತ್ತರ ದೇಶಗಳಿಗೆ ಭೇಟಿ ನೀಡುತ್ತಿರುವುದು ಇದೇ ಮೊದಲು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)