varthabharthi

ಗಲ್ಫ್ ಸುದ್ದಿ

ಡಾ.ತುಂಬೆ ಮೊಯ್ದಿನ್, ಶೇಖ್ ಕರ್ನೀರೆಗೆ ಉನ್ನತ ಪುರಸ್ಕಾರ

ಅಜ್ಮಾನ್: ಬಿಸಿಎಫ್‌ನಿಂದ 18ನೇ ಬ್ಯಾರೀಸ್ ಕ್ರೀಡೋತ್ಸವ-2020

ವಾರ್ತಾ ಭಾರತಿ : 23 Feb, 2020

ಜ್ಮಾನ್, ಜ.23: ತುಂಬೆ ಗ್ರೂಪ್, ತುಂಬೆ ಯೂನಿವರ್ಸಿಟಿ ಹಾಸ್ಪಿಟಲ್, ಬಾಡಿ ಆ್ಯಂಡ್ ಸೋಲ್ ಹಾಗೂ ಟೆರೇಸ್ ರೆಸ್ಟಾರೆಂಟ್‌ನ ಸಹಯೋಗದಲ್ಲಿ ಬ್ಯಾರೀಸ್ ಕಲ್ಚರಲ್ ಫೋರಂ(ಬಿಸಿಎಫ್)ನ 18ನೇ ವರ್ಷದ ‘ಬಿಸಿಎಫ್ ಕ್ರೀಡೋತ್ಸವ-2020’ ಹಾಗೂ ಆರೋಗ್ಯ ಶಿಬಿರ ಯುಎಇನ ಅಜ್ಮಾನ್‌ನಲ್ಲಿರುವ ತುಂಬೆ ಗ್ರೌಂಡ್‌ನಲ್ಲಿ ಇತ್ತೀಚೆಗೆ ಜರುಗಿತು.

ಬಿಸಿಎಫ್ ಅಧ್ಯಕ್ಷ ಡಾ.ಬಿ.ಕೆ.ಯೂಸುಫ್ ಮಾರ್ಗದರ್ಶನದಲ್ಲಿ ನಡೆದ ಈ ಕ್ರೀಡೋತ್ಸವದ ಅಧ್ಯಕ್ಷತೆಯನ್ನು ಅಫೀಕ್ ಹುಸೇನ್ ವಹಿಸಿದ್ದರು. ಸುಲೈಮಾನ್ ಮೂಳೂರು ಉಪಾಧ್ಯಕ್ಷತೆ ವಹಿಸಿದ್ದರು. ಸಂಚಾಲಕ ಲತೀಫ್ ಪುತ್ತೂರು ಹಾಗೂ ತಂಡದ ಇತರ ಸದಸ್ಯರು ಸಹಕರಿಸಿದ್ದರು.

ತುಂಬೆ ಯೂನಿವರ್ಸಿಟಿ ಹಾಸ್ಪಿಟಲ್‌ನ ಸಹಕಾರದೊಂದಿಗೆ ನಡೆದ ಉಚಿತ ವೈದ್ಯಕೀಯ ಶಿಬಿರದ ಅಧ್ಯಕ್ಷತೆಯನ್ನು ಲತೀಫ್ ಮುಲ್ಕಿ ವಹಿಸಿದ್ದರು.
ಈ ಸಂದರ್ಭದಲ್ಲಿ ಸಾಮಾಜಿಕ ಅಭಿವೃದ್ಧಿಗಾಗಿ ಉತ್ಕೃಷ್ಟ ಸೇವೆಗಳನು ನೀಡಿದ್ದಕ್ಕಾಗಿ ತುಂಬೆ ಗ್ರೂಪ್‌ನ ಅಧ್ಯಕ್ಷ ಹಾಗೂ ಬಿಸಿಎಫ್ ಸಂಸ್ಥಾಪನಾ ಪೋಷಕರೂ ಆದ ಡಾ.ತುಂಬೆ ಮೊಯ್ದಿನ್‌ರಿಗೆ ಸಾಮಾಜಿಕ ಸೇವೆ ಹಾಗೂ ಮಾನವೀಯತೆಗಾಗಿನ ಪುರಸ್ಕಾರ ನೀಡಿ ಗೌರವಿಸಲಾಯಿತು.

ಬಿಸಿಎಫ್ ವತಿಯಿಂದ ಡಾ.ಬಿ.ಅಹ್ಮದ್ ಹಾಜಿ ಮುಹಿಯುದ್ದೀನ್‌ರ ಅವರ ಆತ್ಮಕಥೆ ‘ಅಬ್ಬಾ’ ಅನ್ನು ತುಂಬೆ ಕುಟುಂಬದ ಸದಸ್ಯರು ಇದೇವೇಳೆ ಬಿಡುಗಡೆಗೊಳಿಸಿದರು. ಬಿಸಿಎಫ್ ಪ್ರಧಾನ ಕಾರ್ಯದರ್ಶಿ ಡಾ.ಕಾಪು ಮುಹಮ್ಮದ್ ಅವರು ಅಹ್ಮದ್ ಹಾಜಿಯವರ ಸಾಧನೆಯ ಹಾದಿಯನ್ನು ವಿವರಿಸಿದರು.

ಈ ಸಮಾರಂಭದಲ್ಲಿ ಕೈಗಾರಿಕೆ, ವೃತ್ತಿ ಕ್ಷೇತ್ರ ಹಾಗೂ ಸಮಾಜಕ್ಕೆ ನೀಡಿದ ಕೊಡುಗೆಗಾಗಿ ಕೆಎಸ್‌ಎನ ಎಕ್ಸ್‌ಪರ್ಟೈಸ್ ಗ್ರೂಪ್‌ನ ಆಡಳಿತ ನಿರ್ದೇಶಕ ಶೈಖ್ ಕರ್ನಿರೆ ಅವರಿಗೆ 2020ರ ಸಾಲಿನ ಉದ್ಯಮಶೀಲತಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ತುಂಬೆ ಯುನಿವರ್ಸಿಟಿ ಹಾಸ್ಪಿಟಲ್‌ನ ಪರವಾಗಿ ಸಿಒಒ ಡಾ.ಫೈಸಲ್ ಹಾಗೂ ವಿಪೇಶ್ ಪ್ರಶಂಸಾ ಪುರಸ್ಕಾರ ಸ್ವೀಕರಿಸಿದರು. ತುಂಬೆ ಗ್ರೂಪ್‌ಗೆ ಸೇರಿದ ಬಾಡಿ ಆ್ಯಂಡ್ ಸೋಲ್/ಟೆರೇಸ್ ರೆಸ್ಟೋರೆಂಟ್/ಹಾಸ್ಪಿಟಾಲಿಟಿ ವಿಭಾಗದ ಹಿಶಾಮ್ ಹಾಗೂ ಆಯೂಶ್‌ರಿಗೆ ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅತಿಥಿಗಳು ಪ್ರಶಂಸಾ ಪುರಸ್ಕಾರ ಸ್ವೀಕರಿಸಿದರು.

ಸೈಯದ್ ಅಸ್ಗರ್ ಅಲಿ ತಂಙಳ್, ಅಲ್ ಮಝರ್ ಮೆಟರ್ ಇಲೆಕ್ಟ್ರಾ ಪ್ಲಾಟಿಂಗ್‌ನ ಎಂ.ಡಿ. ಅಬ್ದುಲ್ ಸಮದ್ ಎನ್., ಅಲ್ಹಾಜ್ ಫಯಾಝ್ ಅಬ್ದುಲ್ಲಾ ಅಲ್ ಮಝ್ರೂಖಿ, ಜಾವೇದ್ ಖತೀಬ್, ಭಟ್ಕಳ ಜಮಾಅತ್ ಅಶ್ಫಾಕ್ ಸಾದಾ, ಅಲ್ ಮುಸಲ್ಲಂ ಕಾಂಟ್ರಾಕ್ಟಿಂಗ್ ಕೊ. ಇದರ ಅಧ್ಯಕ್ಷ ಮುಹಮ್ಮದ್ ಸಾದಿಕ್ ಬೆಲ್ಹೀಮ್, ನವೀದ್ ಮಾಗುಂಡಿ, ಯೂಸುಫ್ ಬ್ರಹ್ಮಾವರ, ಕೆ.ಎಂ.ಅಶ್ರಫ್, ಮುಸ್ತಫ ನಈಮಿ ಹಾವೇರಿ, ಶಾರ್ಜಾ ಕರ್ನಾಟಕ ಸಂಘದ ಪ್ರ. ಕಾರ್ಯದಶಿ ನೋವೆಲ್ ಡಿಸೋಜ, ಸಂಘದ ಪೋಷಕ ಮಾರ್ಕ್ ಡೆನಿಸ್, ಕೆಎನ್‌ಆರ್‌ಐ ಪ್ರಧಾನ ಕಾರ್ಯದರ್ಶಿ ಪ್ರಭಾಕರ್ ಅಂಬಲತೆರೆ, ಕೆಎಸ್‌ಸಿಎಫ್ ಅಧ್ಯಕ್ಷ ನಾಸಿರ್ ನಂದವಾರ, ನಫೀಸ್ ಗ್ರೂಪ್ ಅಧ್ಯಕ್ಷ ಅಬೂಸಾಲಿಹ್, ಎಆರ್‌ಐಬಿ ಗ್ರೂಪ್ ಎಂ.ಡಿ. ಅಬ್ದುರ್ರಝಾಕ್ ಡೀವಾ, ಅನಿವಾಸಿ ಕನ್ನಡಿಗರ ಒಕ್ಕೂಟ ಯುಎಇ ಇದರ ಅಧ್ಯಕ್ಷ ರಶೀದ್ ಬಿಜೈ, ದುಬೈ ಕನ್ನಡಿಗ ಒಕ್ಕೂಟದ ಅಧ್ಯಕ್ಷ ಮುಹಮ್ಮದ್ ಬಶೀರ್, ಶರೀಫ್ ಕಾವು, ತುಂಬೆ ಗ್ರೂಪ್ ನ ಹಾಸ್ಪಿಟಾಲಿಟಿ ಮ್ಯಾನೇಜ್‌ಮೆಂಟ್ ನ ನಿರ್ದೇಶಕ ಫರ್ಹಾದ್, ಆಯುಷ್, ಫರ್ವಾಝ್, ಇಮ್ರಾನ್, ವಿಪೇಶ್, ಹಿಶಾಂ, ಅಬ್ದುಲ್ಲತೀಫ್ ಪುತ್ತೂರು, ಅಮೀರ್ ಹಳೆಯಂಗಡಿ, ರಿಯಾಝ್ ಸುರತ್ಕಲ್, ಸುಲೈಮಾನ್ ಮೂಳೂರು, ಹುಸೈನ್ ಸುರತ್ಕಲ್, ಉಸ್ಮಾನ್ ಮೂಳೂರು, ರಫೀಕ್ ಗುರುಪುರ, ಮುಹಮ್ಮದ್ ಅಸ್ಲಂ ಕಾರಾಜೆ, ಅಶ್ರಫ್ ಜೋಕಟ್ಟೆ, ಅಬ್ದುಲ್ ಹಮೀದ್ ಬಜ್ಪೆ ಹಾಗೂ ಬಿಸಿಎಫ್‌ನ ಇತರ ಸದಸ್ಯರು ಉಪಸ್ಥಿತರಿದ್ದರು.

ಬಿಸಿಎಫ್ ಕ್ರೀಡಾ ದಿನಾಚರಣೆಯ ಅಧ್ಯಕ್ಷತೆಯನ್ನು ಡಾ.ಬಿ.ಕೆ.ಯೂಸುಫ್ ವಹಿಸಿದ್ದರು. ಡಿಕೆಎಸ್‌ಸಿ ಗೌರವಾಧ್ಯಕ್ಷ ಸೈಯದ್ ತಾಹಾ ಬಾಫಕಿ ತಂಙಳ್‌ರ ದುಆದೊಂದಿಗೆ ಕ್ರೀಡಾ ಕಾರ್ಯಕ್ರಮ ಆರಂಭಗೊಂಡವು.

ಮಹಿಳೆಯರು, ಮಕ್ಕಳು ಸೇರಿದಂತೆ 800ಕ್ಕೂ ಅಧಿಕ ಮಂದಿ ಕ್ರೀಡೋತ್ಸವದಲ್ಲಿ ಪಾಲ್ಗೊಂಡಿದ್ದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. 

ಮಹಿಳೆಯರು ಹಾಗೂ ಮಕ್ಕಳಿಗಾಗಿನ ಕಾರ್ಯಕ್ರಮಗಳನ್ನು ಬಿಸಿಎಫ್‌ನ ಮಹಿಳಾ ವಿಭಾಗದ ಅಧ್ಯಕ್ಷೆ ಮುಮ್ತಾಝ್ ಹುಸೈನ್ ನಾಯಕತ್ವದಲ್ಲಿ ಮಹಿಳಾ ಸದಸ್ಯೆಯರು ಅಚ್ಚುಕಟ್ಟಾಗಿ ಆಯೋಜಿಸಿದ್ದರು. ಈ ಸಂದರ್ಭದಲ್ಲಿ ಆಯೋಜಿಸಲಾದ ಅಡುಗೆ ಸ್ಪರ್ಧೆಯಲ್ಲಿ 90 ಮಂದಿ ಪಾಲ್ಗೊಂಡಿದ್ದರು. 150ಕ್ಕೂ ಅಧಿಕ ಖಾದ್ಯಗಳನ್ನು ಸ್ಪರ್ಧೆಗೆ ಇರಿಸಲಾಗಿತ್ತು.  ಬಿಸಿಎಫ್ ಮಹಿಳಾ ವಿಭಾಗದ ಶಹನಾಝ್, ಆಯಿಶ ಮೂಳೂರು, ಝೈನಬ ಉಸ್ಮಾನ್, ಆಯಿಶ ಅಮೀರ್, ತಂಝೀಮ ರಿಯಾಝ್, ಫರ್ಝಾನ ಲತೀಫ್, ರೆಹಾನ ಇಕ್ಬಾಲ್, ಖೈರುನ್ನಿಸ, ಆಶೀನ್ ಕಾಪು ಹಾಗೂ ಇತರರು ಸಹಕರಿಸಿದರು.

ಕಾರ್ಯಕ್ರಮದ ಅಂಗವಾಗಿ ತುಂಬೆ ಗ್ರೂಪ್ ಪ್ರಾಯೋಜಕತ್ವದಲ್ಲಿ ಸ್ವಾದಿಷ್ಟವಾದ ಔತಣಕೂಟವನ್ನು ಏರ್ಪಡಿಸಲಾಗಿತ್ತು. ತುಂಬೆ ಗ್ರೂಪ್ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಕೂಡಾ ಆಯೋಜಿಸಲಾಗಿತ್ತು.

 ಬಿಸಿಎಫ್ ಉಪಾಧ್ಯಕ್ಷ ಎಂ.ಇ.ಮೂಳೂರು ಕಿರಾಅತ್ ಪಠಿಸಿದರು. ನವಾಝ್ ಕೋಟೆಕಾರ್ ವಂದಿಸಿದರು 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)