varthabharthi


ಗಲ್ಫ್ ಸುದ್ದಿ

ಫೆ.28ರಂದು ಮಸ್ಕತ್ ನಲ್ಲಿ ಕರ್ನಾಟಕ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ

ವಾರ್ತಾ ಭಾರತಿ : 23 Feb, 2020

ಒಮನ್, ಫೆ.23: ಓಮನ್ ನಲ್ಲಿ ವಾಸವಿರುವ ಕರಾವಳಿಯ ಕ್ರಿಕೆಟಿಗರ ತಂಡ ಫೋರ್ ಆ್ಯಂಡ್ ಸಿಕ್ಸ್ ಗ್ರೂಪ್ ಫೆ.28ರಂದು ಮಸ್ಕತ್‌ನ ಅಲ್ ಅನಸಾಬ್ ನಲ್ಲಿ ಕರ್ನಾಟಕ ಪ್ರಿಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ ಏರ್ಪಡಿಸಿದೆ.

ಒಮನಲ್ಲಿ ನೆಲೆಸಿರುವ ಕನ್ನಡಿಗರಿಗೆ ಮಾತ್ರ ಈ ಪಂದ್ಯಾವಳಿಯಲ್ಲಿ ಭಾಗವಹಿಸಲು ಅವಕಾಶವಿದ್ದು, ಎಂಟು ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ.

ಕಟೀಲ್ ಫ್ರೆಂಡ್ಸ್, ಸಮೀಕ್ಷ್ 11, ಎಚ್.ಸಿ.ಸಿ, ಆರ್.ಸಿ, ಎನ್.ಸಿ.ಸಿ. ಮಸ್ಕತ್, ಬ್ಲೂಸ್ಟಾರ್ ಉಜಿರೆ, ಓಂಕಾರ್, ಎಂ.ಎಫ್.ಎಸ್. ಸೋಹಾರ್ ಈ ಎಂಟು ತಂಡಗಳು ಭಾಗವಹಿಸಲಿದ್ದು, ವೀರ ವನಿತೆಯರಾದ ರಾಣಿ ಚೆನ್ನಮ್ಮ ಹಾಗೂ ರಾಣಿ ಅಬ್ಬಕ್ಕ ಹೆಸರಿನಲ್ಲಿ 2 ಗ್ರೂಪ್ ಗಳಾಗಿ ತಂಡಗಳನ್ನು ವಿಂಗಡಿಸಲಾಗಿದೆ. ಎರಡು ವಿಭಾಗಗಳಿಂದ ಉಪಾಂತ್ಯದಲ್ಲಿ ಜಯಿಸುವ ತಂಡ ಫೈನಲ್ ಪ್ರವೇಶಿಸಲಿವೆ.

ಪಂದ್ಯಾವಳಿಯ ಕುರಿತಂತೆ ಪಂದ್ಯಾವಳಿಯ ಆಯೋಜಕ ದಯಾನಂದ ರಾವ್ ಮಾತನಾಡಿ, ಸಮಾಜದ ಕೆಲವು ಬಡ ಮಕ್ಕಳ ಶಿಕ್ಷಣಕ್ಕೆ ನೆರವಾಗುವ ದೃಷ್ಟಿಯಿಂದ ಈ ಪಂದ್ಯಕೂಟವನ್ನು ಅಯೋಜಿಸಲಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)