ಅಹ್ಸಾನಾ ಫರ್ಹತ್
ಮಂಗಳೂರು, ಫೆ.23: ಕಾಸರಗೋಡು ಸಮೀಪದ ವಿದ್ಯಾನಗರ ನಿವಾಸಿ ಉದ್ಯಮಿ ಎಂಪಿ ನಾಸರ್ ಮತ್ತು ಆಯಿಶಾ ಬಸ್ತಿಕಾರ್ ದಂಪತಿಯ ಪುತ್ರಿ ಅಹ್ಸಾನಾ ಫರ್ಹತ್ (26) ರವಿವಾರ ಕಲ್ಲಿಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಕಳೆದೊಂದು ವರ್ಷದಿಂದ ಅನಾರೋಗ್ಯದಿಂದಿದ್ದ ಅಹ್ಸಾನಾ ಫರ್ಹತ್ ಚಿಕಿತ್ಸೆ ಫಲಕಾರಿಯಾಗದೆ ರವಿವಾರ ಮುಂಜಾನೆ ಸುಮಾರು 4 ಗಂಟೆಗೆ ಕೊನೆಯುಸಿರೆಳೆದರು.
ಮೃತರು ಪತಿ ಹಾಗೂ ಹೆಣ್ಣು ಮಗುವನ್ನು ಅಗಲಿದ್ದಾರೆ. ಮೃತರ ದಫನ ಕಾರ್ಯವು ಕಾಸರಗೋಡು ಸಮೀಪದ ಮುನ್ನೂರು ಜುಮಾ ಮಸ್ಜಿದ್ ಆವರಣದಲ್ಲಿ ನೆರವೇರಿಸಲಾಯಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.
Next Story