varthabharthi

ರಾಷ್ಟ್ರೀಯ

ವಿಶ್ವದ 30 ಅತ್ಯಂತ ಮಲಿನ ನಗರಗಳಲ್ಲಿ 21 ಭಾರತದಲ್ಲಿ!

ವಾರ್ತಾ ಭಾರತಿ : 25 Feb, 2020

ಫೈಲ್ ಚಿತ್ರ

ಹೊಸದಿಲ್ಲಿ,ಫೆ.25: ವಿಶ್ವದ ಅತ್ಯಂತ ಮಲಿನ 30 ನಗರಗಳ ಪೈಕಿ 20 ಭಾರತದಲ್ಲಿವೆ ಮತ್ತು ದಿಲ್ಲಿ ವಿಶ್ವದ ಅತ್ಯಂತ ಕೊಳಕು ರಾಜಧಾನಿಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ಐಕ್ಯುಏರ್ ಏರ್ ವಿಜುವಲ್ ಸಿದ್ಧಪಡಿಸಿರುವ ವಿಶ್ವ ವಾಯು ಗುಣಮಟ್ಟ ವರದಿ 2019ರಂತೆ ಉತ್ತರ ಪ್ರದೇಶದ ಘಾಝಿಯಾಬಾದ್ ವಿಶ್ವದಲ್ಲಿಯೇ ಅತ್ಯಂತ ಕೊಳಕು ನಗರವಾಗಿದೆ. ನಂತರದ ಸ್ಥಾನಗಳಲ್ಲಿ ಚೀನಾದ ಹೋಟನ್, ಪಾಕಿಸ್ತಾನದ ಗುಜ್ರನವಾಲಾ ಮತ್ತು ಫೈಸಲಾಬಾದ್ ಹಾಗೂ ದಿಲ್ಲಿಗಳಿವೆ.

 ಘಾಝಿಯಾಬಾದ್, ನೋಯ್ಡ, ದಿಲ್ಲಿ, ಗುರುಗ್ರಾಮ, ಗ್ರೇಟರ್ ನೊಯ್ಡಾ, ಬಂಧ್ವಾರಿ, ಲಕ್ನೋ, ಬುಲಂದಶಹರ, ಮುಝಫ್ಫರ್‌ನಗರ, ಬಾಗಪತ್, ಜಿಂದ್, ಫರೀದಾಬಾದ್, ಕೋರಾಟ್, ಭಿವಾಡಿ, ಪಾಟ್ನಾ, ಪಲ್ವಾಲ್, ಮುಝಫ್ಫರ್‌ಪುರ,ಜಿಸ್ಸಾರ್,ಕುಟೈಲ್,ಜೋಧಪುರ ಮತ್ತು ಮೊರಾದಾಬಾದ್ ಇವು ಈ ಪಟ್ಟಿಯಲ್ಲಿರುವ 21 ಭಾರತೀಯ ನಗರಗಳಾಗಿವೆ.

ಅತ್ಯಂತ ಮಲಿನ ದೇಶಗಳ ಪೈಕಿ ಭಾರತವು ಐದನೇ ಸ್ಥಾನದಲ್ಲಿದೆ. ಬಾಂಗ್ಲಾದೇಶ ಅಗ್ರಸ್ಥಾನದಲ್ಲಿದ್ದರೆ ಪಾಕಿಸ್ತಾನ,ಮಂಗೋಲಿಯಾ ಮತ್ತು ಅಫಘಾನಿಸ್ತಾನ್ ಅನುಕ್ರಮವಾಗಿ 2,3 ಮತ್ತು 4ನೇ ಸ್ಥಾನಗಳಲ್ಲಿವೆ.

ಆದರೆ ಕಳೆದ ವರ್ಷದಿಂದೀಚೆಗೆ ಭಾರತೀಯ ನಗರಗಳಲ್ಲಿ ಸುಧಾರಣೆ ಕಂಡು ಬಂದಿದೆ ಎಂದೂ ವರದಿಯು ಉಲ್ಲೇಖಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)