varthabharthi


ಸಿನಿಮಾ

ಕರಣ್ ಜೋಹರ್‌ರ ಮುಂದಿನ ಚಿತ್ರದಲ್ಲಿ ಶಾಹಿದ್ ಕಪೂರ್

ವಾರ್ತಾ ಭಾರತಿ : 27 Feb, 2020

‘ಕಬೀರ್ ಸಿಂಗ್’ ಚಿತ್ರದ ಭಾರೀ ಯಶಸ್ಸಿನ ಬಳಿಕ ಶಾಹಿದ್ ಕಪೂರ್ ಖ್ಯಾತಿ ಹೆಚ್ಚಾಗಿದೆ. ಆದರೆ, ಚಿತ್ರ ವಿಮರ್ಶಕರು ಹಾಗೂ ನೆಟ್ಟಿಗರು ‘ಕಬೀರ್ ಸಿಂಗ್’ ಚಿತ್ರದ ಬಗ್ಗೆ ವಿಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೂ ಶಾಹಿದ್ ಕಪೂರ್ ಹಾಗೂ ಸಹ ನಟಿ ಕಿಯಾರಾ ಅಡ್ವಾಣಿ ಅವರ ನಟನೆಗೆ ಬಗ್ಗೆ ವ್ಯಾಪಕ ಪ್ರಶಂಶೆ ವ್ಯಕ್ತವಾಗಿದೆ. ಈಗ ಶಾಹಿದ್ ಅವರಿಗೆ ಹಲವು ಚಿತ್ರಗಳಲ್ಲಿ ನಟಿಸಲು ಆಫರ್‌ಗಳಿವೆ. ಸದ್ಯ ಅವರು ಧರ್ಮಾ ನಿರ್ಮಾಣ ಸಂಸ್ಥೆಯ ಅಡಿಯಲ್ಲಿ ಕರಣ ಜೋಹರ್ ಅವರ ಚಿತ್ರದಲ್ಲಿ ನಟಿಸಲಿದ್ದಾರೆ. ಈ ಚಿತ್ರದಲ್ಲಿ ಶಾಹಿದ್ ಕಪೂರ್ ದೇಶಭಕ್ತನಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರ ಆ್ಯಕ್ಷನ್ ಚಿತ್ರವಾಗಿದೆ. ಇದಕ್ಕೆ ಕಠಿಣ ದೈಹಿಕ ಸಿದ್ಧತೆ ಬೇಕು. ಈ ಚಿತ್ರದಲ್ಲಿ ನಟಿಸುವ ಬಗ್ಗೆ ಶಾಹಿದ್ ಕಪೂರ್ ಇದುವರೆಗೆ ಯಾವುದೇ ಅಧೀಕೃತ ಹೇಳಿಕೆ ನೀಡಿಲ್ಲ. ಆದರೆ, ಶೀಘ್ರದಲ್ಲಿ ಅಧೀಕೃತ ಹೇಳಿಕೆ ನೀಡುವ ಸಾಧ್ಯತೆ ಇದೆ ಎಂದು ವರದಿಯೊಂದು ತಿಳಿಸಿದೆ. ‘ಶಾಂದಾರ್’ (2015) ಚಿತ್ರದಲ್ಲಿ ಕರಣ್ ಜೋಹರ್ ಹಾಗೂ ಶಾಹಿದ್ ಕಪೂರ್ ಜೊತೆಯಾಗಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)