varthabharthi


ಸಿನಿಮಾ

ಮತ್ತೆ ಆ್ಯಕ್ಷನ್ ಪಾತ್ರದಲ್ಲಿ ಟೈಗರ್ ಶ್ರಾಫ್

ವಾರ್ತಾ ಭಾರತಿ : 27 Feb, 2020

ಟೈಗರ್ ಶ್ರಾಫ್ ತನ್ನ ಅಭಿಮಾನಿಗಳಿಗೆ ಖುಶಿ ಕೊಡುವಂತಹ ಸುದ್ದಿಯನ್ನು ನೀಡಿದ್ದಾರೆ. ಅವರ ಅವರು ಅಭಿನಯದ ಸೂಪರ್ ಹಿಚ್ ಚಿತ್ರ ಹೀರೋಪಂತಿಯ ಮುಂದುವರಿದ ಭಾಗ ತೆರೆಗೆ ಬರಲಿದೆ. ಅದ್ದೂರಿಯಾಗಿಯೇ ನಿರ್ಮಾಣಗೊಳ್ಳಲಿರುವ ಈ ಚಿತ್ರ ಮೇ ತಿಂಗಳಲ್ಲಿ ಸೆಟ್ಟೇರಲಿದೆ.

ಹೀರೋಪಂತಿ ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣ ಮಾಡಿದ ಟೈಗರ್ ಶ್ರಾಫ್ ತನ್ನ ತೊಚ್ಚಲ ಚಿತ್ರದಲ್ಲಿನ ಆ್ಯಕ್ಷನ್ ದೃಶ್ಯಗಳಿಂದಲೇ ಪ್ರೇಕ್ಷಶಕರ ಮನಗೆದ್ದರು ಅಷ್ಟೇ ಅಲ್ಲದೆ ಬಾಲಿವುಡ್‌ನ ಸೂಪರಸ್ಟಾರ್ ಗಳ ಸಾಲಿಗ ಸೇರ್ಪಡೆಗೊಂಡರು.

    ಹಾಗೆ ನೋಡಿದರೆ ಹೀರೋಪಂತಿ ಚಿತ್ರದ ಸಿಕ್ವೇಲ್‌ನ ನಿರ್ಮಿಸುವ ಯೋಜನೆ ಕಳೆದ ವರ್ಷದ ಆರಂಭದಲ್ಲೇ ರೂಪುಗೊಂಡಿತ್ತು. ಆದರೆ ಕಾರಣಾಂತರಗಳಿಂದ ಸರಿಯಾದ ಸ್ಕ್ರಿಪ್ಟ್ ದೊರೆಯದ ಕಾರಣ ನಿರ್ದೇಶಕ ಅಹ್ಮದ್ ಖಾನ್ ಪ್ರಾಜೆಕ್ಟನ್ನು ಮುಂದೂಡುತ್ತಲೇ ಬಂದಿದ್ದರು. ಹೀರೋಪಂತಿಯಲ್ಲಿ ಕೃತಿ ಸನೂನ್ ನಾಯಕಿಯಾಗಿದ್ದರು. ಆದಾಗ್ಯೂ ಚಿತ್ರದ ಮಂದುವರಿದ ಭಾಗಕ್ಕೆ ನಾಯಕಿ ಯಾರೆಂಬ ಬಗ್ಗೆ ಚಿತ್ರತಂಡ ಈವರೆಗೆ ಯಾವುದೇ ಸುಳಿವು ನೀಡಿಲ್ಲ. ಇದರ ಜೊತೆಗೆ ಉಳಿದ ನಟ,ನಟಿಯರು ಹಾಗೂ ತಾಂತ್ರಿಕ ವರ್ಗದ ವಿವರಗಳು ಇನ್ನಷ್ಟೇ ಪ್ರಕಟಗೊಳ್ಳಬೇಕಿದೆ. ಈ ನಡುವೆ ಟೈಗರ್ ಶ್ರಾಫ್ ಭಾಗಿ3 ಚಿತ್ರದ ಬಿಡುಗಡೆಗೆ ರೆಡಿಯಾಗುತ್ತಿದೆ. ಶ್ರದ್ಧಾಕಪೂರ್ ಹಾಗೂ ರಿತೇಶ್‌ದೇಶಮಖ್ ಈ ಚಿತ್ರದಲ್ಲಿ ಟೈಗರ್ ಶ್ರಾಫ್ ಜೊತೆ ನಟಿಸುತ್ತಿದ್ದಾರೆ. ಆದಾದ ಬಳಿ ಟೈಗರ್‌ಶ್ರಾಫ್, ಹಾಲಿವುಡ್ ಚಿತ್ರ ರ್ಯಾಂಬೊದ ಬಾಲಿವುಡ್ ರಿಮೇಕ್‌ಗೆ ಬಣ್ಣ ಹಚ್ಚಲಿದ್ದು, ಸಿದ್ಧಾರ್ಥ ಆನಂದ್ ಆ್ಯಕ್ಷನ್ ಕಟ್ ಹೇಳಲಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)