ಎಂ.ಆರ್.ಮುಹಮ್ಮದ್ ರಫೀಕ್
ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಮೂರುಗೋಳಿ ಕಲಂಜಿಬೈಲ್ ನಿವಾಸಿ ಮೂಲತ ಕಾಸರಗೋಡಿನ ಅಡ್ಡೂರಿನ ಎಂ.ಆರ್.ಮುಹಮ್ಮದ್ ರಫೀಕ್ (51) ಶುಕ್ರವಾರ ನಿಧನರಾಗಿದ್ದಾರೆ.
ತನ್ನ 'ಎಂ.ಆರ್. ಆಡಿಯೋ' ಸಂಸ್ಥೆ ಮೂಲಕ ಮಲಯಾಳಂ, ಕನ್ನಡ, ಬ್ಯಾರಿ ಮುಂತಾದ ಭಾಷೆಗಳಲ್ಲಿ ಹಲವಾರು ಧ್ವನಿಸುರುಳಿಗಳನ್ನು ಹೊರತಂದಿದ್ದ ಅವರು, ಬ್ಯಾರಿ ಭಾಷೆಗೆ ತನ್ನದೇ ಆದ ಕೊಡುಗೆ ನೀಡಿದ್ದರು. ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದ ಅವರು ತಂದೆ, ತಾಯಿ, ಪತ್ನಿ, ಸಹೋದರ-ಸಹೋದರಿಯರು, ಮಕ್ಕಳು ಮತ್ತು ಬಂಧುಮಿತ್ರರನ್ನು ಅಗಲಿದ್ದಾರೆ.
Next Story